Advertisement
“ನಮಗೆ ಯಾರ ಮೇಲೂ ಯಾವುದೇ ದ್ವೇಷವಿಲ್ಲ. ಆದರೆ ಯಾರು ಸಲ್ಮಾನ್ ಮತ್ತು ದಾವೂದ್ ಗ್ಯಾಂಗ್‌ಗೆ ನೆರವಾಗುತ್ತಾರೋ, ಅಂಥವರು ಎಚ್ಚರಿಕೆಯಿಂದಿರಿ. ಸಿದ್ದಿಕಿಗೂ ಕೂಡ ಸಲ್ಮಾನ್, ದಾವೂದ್ ಜತೆ ನಂಟಿತ್ತು. ಅದಕ್ಕಾಗಿಯೇ ಅವರನ್ನು ಹತ್ಯೆಗೈದಿದ್ದೇವೆ. ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ನಡೆಸಿದ್ದ ಅನೂಜ್ ಪೊಲೀಸ್ ವಶದಲ್ಲಿರುವಾಗಲೇ ಮೃತಪಟ್ಟಿದ್ದಾನೆ. ಆತನ ಸಾವಿಗೂ ನಾವು ಪ್ರತೀಕಾರ ತೀರಿಸಿದ್ದೇವೆ’ ಎಂದು ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಶುಬು ಲೊಂಕಾರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ.
ಸಿದ್ದಿಕಿ ಮಾತ್ರವಲ್ಲ, ಅವರ ಪುತ್ರ, ಶಾಸಕ ಝೀಶಾನ್ ಸಿದ್ದಿಕಿ ಕೂಡ ಗ್ಯಾಂಗ್‌ಸ್ಟರ್‌ಗಳ ಹಿಟ್‌ಲಿಸ್ಟ್‌ನಲ್ಲಿದ್ದ ಎಂಬ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಅಪ್ಪ-ಮಗ ಇಬ್ಬರನ್ನೂ ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು ಎಂದು ಆರೋಪಿ ಹೇಳಿದ್ದಾನೆ. ಜತೆಗೆ ಸಿದ್ದಿಕಿ ಹತ್ಯೆ ವೇಳೆ ಅವರ ಪಕ್ಕದಲ್ಲಿ ಭದ್ರತೆಗೆಂದು ನಿಯೋಜಿಸಲ್ಪಟ್ಟಿದ್ದ ಕಾನ್‌ಸ್ಟೇಬಲ್‌ಗೆ ಖಾರದ ಪುಡಿ ಎರಚಲಾಯಿತು ಎಂದೂ ಆರೋಪಿಗಳು ಹೇಳಿದ್ದಾರೆ.
Related Articles
ಸಿದ್ದಿಕಿ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಉ.ಪ್ರದೇಶದ ಶಿವಕುಮಾರ್ ಗೌತಮ್ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದ ಪೋಸ್ಟ್‌ಗಳು ಗಮನ ಸೆಳೆದಿವೆ. ಈತ ಜು.24ರಂದು ಇನ್‌ಸ್ಟಾದಲ್ಲಿ ತನ್ನ ಫೋಟೋ ಹಾಕಿ “ಗೊತ್ತಾ, ನಿನ್ನ ಗೆಳೆಯ ಗ್ಯಾಂಗ್‌ಸ್ಟರ್'(ಯಾರ್ ತೇರಾ ಗ್ಯಾಂಗ್‌ಸ್ಟರ್ ಹೇ ಜಾನಿ) ಎಂದು ಬರೆದಿದ್ದ. ಅದಕ್ಕೂ ಮುನ್ನ, “ಅಪ್ಪ ಒಳ್ಳೆಯವರು, ನಾನಲ್ಲ'(ಶರೀಫ್ ಬಾಪ್ ಹೇ, ಮೇ ನಹೀಂ) ಎಂದೂ ಬರೆದಿದ್ದ.
Advertisement
ಮೇ 26ರಂದು ಕನ್ನಡದ ಯಶ್ ಅಭಿನಯದ ಕೆಜಿಎಫ್ ಚಿತ್ರದ “ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್’ ಎಂಬ ಡೈಲಾಗ್ ಅನ್ನು ಅದೇ ಚಿತ್ರದ ಹಿನ್ನೆಲೆ ಸಂಗೀತದೊಂದಿಗೆ ಪೋಸ್ಟ್ ಮಾಡಿದ್ದ. ಈತ ಈಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.