Advertisement

ದತ್ತ ಪೀಠವೇ ಬೇರೆ, ಬಾಬಾ ಬುಡಾನ್ ದರ್ಗಾವೇ ಬೇರೆ; ಮುಸಲ್ಮಾನರು ಕಣ್ತೆರೆದು ನೋಡಲಿ

01:26 PM Oct 04, 2021 | Team Udayavani |

ಚಿಕ್ಕಮಗಳೂರು : ದತ್ತ ಪೀಠ ಮತ್ತು ಬಾಬಾ ಬುಡಾನ್ ದರ್ಗಾ ಬೇರೆ ಬೇರೆಯಾಗಿದ್ದು ಮುಸಲ್ಮಾನರು ಕಣ್ತೆರೆದು ನೋಡಬೇಕು ಎಂದು ಸಚಿವ ಸುನೀಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ದತ್ತಪೀಠಕ್ಕೆ ಭೇಟಿ ನೀಡಿದ ವೇಳೆ ಮಾತಾಡಿದ ಸಚಿವ ಸುನೀಲ್ ಕುಮಾರ್ , ದತ್ತ ಪೀಠ ಮತ್ತು ನಾಗೇನಹಳ್ಳಿ ಬಾಬಾ ಬುಡಾನ್ ದರ್ಗಾ ಬೇರೆ ಬೇರೆ ಎನ್ನುವುದು ದಾಖಲೆಗಳಿಂದ ಮತ್ತೆ ಮತ್ತೆ ಸಾಬೀತಾಗಿದೆ. ಮುಸಲ್ಮಾನರು ನಾಗೇನಹಳ್ಳಿ ದರ್ಗಾವನ್ನು ಅಭಿವೃದ್ಧಿ ಪಡಿಸಿಕೊಳ್ಳಲಿ, ಇಲ್ಲಿ ಅನಗತ್ಯವಾಗಿ ನಿರ್ಮಿಸಿರೋ ದರ್ಗಾಗಳನ್ನ ನಾಗೇನಹಳ್ಳಿಗೆ ಸ್ಥಳಾಂತರಿಸಿ. ದತ್ತ ಪೀಠವನ್ನು ಹಿಂದೂಗಳಿಗೆ ಮುಕ್ತವಾಗಿ ಪೂಜೆಗೆ ಬಿಡುವಂತೆ ಹೈಕೋರ್ಟ್ ನ ಆದೇಶದ ಮೇರೆಗೆ ಸೂಚಿಸುತ್ತೇನೆ ಎಂದರು.

ಹಿಂದಿನ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಹಿಂದೂಗಳ ವಿರುದ್ಧ ನಿರ್ಣಯ ಕೈಗೊಂಡಿತ್ತು. ಸುಪ್ರೀಂಕೋರ್ಟ್ ಆದೇಶವಿದ್ದರೂ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿರಲಿಲ್ಲ. ಸಮಿತಿ ರಚಿಸಿ ಮುಜಾರ್ ರಿಂದ ಪೂಜೆಗೆ ಅವಕಾಶ ಮಾಡಿತ್ತು, ಹಿಂದಿನ ಸರಕಾರದ ಮುಜಾವರ್ ನೇಮಕವನ್ನು ಹೈಕೋರ್ಟ್ ರದ್ದು ಮಾಡಿ ದತ್ತ ಪೀಠದಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ, ಹಿಂದೂ ಅರ್ಚಕರ ಮೂಲಕವೇ ಪೂಜೆ ಮಾಡಬೇಕೆಂಬ ರೂಪದಲ್ಲಿ ಆದೇಶ ನೀಡಿದೆ.

ನಾನು ದತ್ತ ಪೀಠ ಹೋರಾಟದ ಮೂಲಕವೇ ಸಾರ್ವಜನಿಕ ಜೀವನಕ್ಕೆ ಬಂದವನು,ದತ್ತ ಪೀಠದ ಹೋರಾಟದಿಂದಲೇ ಜನಪ್ರತಿನಿಧಿಯಾಗಿ, ಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಮಂತ್ರಿಯಾದ ಸಂದರ್ಭದಲ್ಲೇ ಕೋರ್ಟ್ ಈ ತೀರ್ಪು ನೀಡಿರುವುದು ನನ್ನ ಜೀವನದ ಯೋಗ, ಈ ಹಿನ್ನೆಲೆಯಲ್ಲಿ ಅತ್ಯಂತ ಸಂತೋಷದಿಂದ ದತ್ತಾತ್ರೇಯನ ದರ್ಶನ ಮಾಡಿದ್ದೇನೆ, ಮತ್ತಷ್ಟು ಹಿಂದುತ್ವದ ಪರ ಕೆಲಸ ಮಾಡುವಂತೆ ಬೇಡಿಕೊಂಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next