ಲಕ್ನೋ: ಉತ್ತರ ಪ್ರದೇಶದಲ್ಲಿ ವರನೊಬ್ಬ ತನ್ನ ಮದುವೆಯ ದಿಬ್ಬಣವನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಪೋಲಿಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದಾನೆ.!
ಪ್ರಶಾಂತ್ ಯಾದವ್ ವರನ ಧಿರಿಸಿನಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪರೀಕ್ಷೆಯನ್ನು ಬರೆದಿದ್ದಾರೆ.
ಪ್ರಶಾಂತ್ ಯಾದವ್ ಅವರ ವಿವಾಹ ಕಾರ್ಯಕ್ರಮ ಸಂಜೆ ನಡೆಯಲಿತ್ತು. ಅವರು ದಿಬ್ಬಣದೊಂದಿಗೆ ಮುಧಾರಿಯಿಂದ ಬಂದಾಗೆ ತೆರಳುತ್ತಿದ್ದರು. ಈ ವೇಳೆ ದಾರಿ ಮಧ್ಯ ಮಹೋಬಾದಲ್ಲಿ ಪರೀಕ್ಷಾ ಕೇಂದ್ರವಿತ್ತು. ಸಂಜೆ ವಿವಾಹಕ್ಕೂ ಮುನ್ನ ಅವರು ಪರೀಕ್ಷೆ ಬರೆಯಲು ನಿರ್ಧರಿಸಿದ್ದು, ಈ ಕಾರಣದಿಂದ ಮದುವೆ ದಿಬ್ಬಣವನ್ನು ನಿಲ್ಲಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ.
ಮಾ ಚಂದ್ರಿಕಾ ಮಹಿಳಾ ಮಹಾವಿದ್ಯಾಲಯ ಮುಂದೆ ನಿಯೋಜನೆಗೊಂಡ ಪೊಲೀಸರು ವರ ಪ್ರಶಾಂತ್ ಅವರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಕೆಲವರು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.
ಅವಕಾಶಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದು ಎಂತಹ ಸಂದರ್ಭದಲ್ಲೂ ಆಚರಣೆಗಳಿಗಿಂತ ಪರೀಕ್ಷೆಗಳಿಗೆ ಆದ್ಯತೆ ನೀಡುವ ಮಹತ್ವವನ್ನು ಪ್ರಶಾಂತ್ ಒತ್ತಿ ಹೇಳಿದರು.