ದೊಡ್ಡಬಳ್ಳಾಪುರ: ಎರಡು ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ, ತಮ್ಮ ಜನಪ್ರಿಯತೆಯಿಂದ 3ನೇ ಬಾರಿಯೂ ಪ್ರಧಾನಿ ಆಗಬೇಕೆನ್ನುವ ಬಯಕೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಆದರೆ, ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲೆಸೆದಿದ್ದಾರೆ. ನಗರದಲ್ಲಿ ಬಿಜೆಪಿ- ಜೆಡಿಎಸ್ ವತಿಯಿಂದ ನಡೆದ ರೋಡ್‌ಶೋನಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ. ಸುಧಾಕರ್‌ರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
Advertisement
ಗೆಲ್ಲಿಸಿ: ರಾಜ್ಯದಲ್ಲಿ ಕಾಂಗ್ರೆಸ್ 28 ಗೆಲ್ಲುತ್ತೇವೆ ಎನ್ನುವುದು ಭ್ರಮೆ. ಇಡೀ ದೇಶದಲ್ಲಿ ಇಂಡಿಯಾ ಮೈತ್ರಿ ಕೂಟ 45 ಸೀಟು ಗೆದ್ದರೆ ಪುಣ್ಯ. ರಾಜ್ಯದ ಜನತೆ ಮೋದಿ ಗ್ಯಾರಂಟಿಗಳನ್ನು ನಂಬುತ್ತಾರೆಯೇ ಹೊರತು ರಾಜ್ಯದ ಗ್ಯಾರಂಟಿಗಳನ್ನಲ್ಲ. 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿಗಳಿಂದ 1 ಕೆ.ಜಿ ಅಕ್ಕಿಯನ್ನೂ ನೀಡಲು ಆಗುತ್ತಿಲ್ಲ. ಈಗ ನೀಡುತ್ತಿರುವ 5 ಕೆ.ಜಿ.ಅಕ್ಕಿ ಪ್ರಧಾನಿ ಮೋದಿ ಅವರದ್ದು. ಇನ್ನು ಕಾಂಗ್ರೆಸ್‌ನ ಪಾಪದ ಕೂಸಾಗಿದ್ದ 370 ನೇ ವಿಧಿ ತೆಗೆದು ಹಾಕಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. 10 ವರ್ಷ ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಎನ್ ಡಿಎ ಪರ ಒಲವಿದ್ದು, ಮೋದಿ ಕೈ ಬಲಪಡಿಸಲು ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಂದೆಡೆ ಕೊಟ್ಟು ಮತ್ತೂಂದೆಡೆ ಕಿತ್ತುಕೊಳ್ಳುತ್ತಿದೆ. 1.05 ಲಕ್ಷ ರೂ., ಸಾಲ ಜನರ ಮೇಲಿದ್ದು ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಆದರೆ ಪ್ರಧಾನಿ ಮೋದಿ ಜಾರಿಗೆ ತಂದಿರುವ, ಗರೀಬ್ ಕಲ್ಯಾಣ್, ಆಯುಷ್ಮಾನ್, ಕಿಸಾನ್ ಮ್ಮಾನ್, ಜನೌಷಧಿ ಮಳಿಗೆಗಳು ಜನರಿಗೆ ಉಪಯುಕ್ತವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ತಿಳಿಸಿದರು.