ಶಿವಮೊಗ್ಗ: ಶಿವಮೊಗ್ಗದಲ್ಲಿ 5 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಟ ಸಂಭ್ರಮಾಚರಣೆ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ. ಇಂತಹ ಮಾನಸಿಕತೆ ಬದಲಾಗಬೇಕು. ಹಿಂದಿನ ಸರಕಾರಗಳ ಅವಧಿಯಲ್ಲಿ ತಿಂಗಳುಗಳೇ ನಡೆದರೂ ಕ್ರಮ ಆಗುತ್ತಿರಲಿಲ್ಲ. ಪ್ರೇಮಸಿಂಗ್ ಪ್ರಕರಣದಲ್ಲಿ ಒಂದೇ ದಿನದಲ್ಲಿ ನಾಲ್ಕು ಆರೋಪಿಗಳ ಬಂಧನವಾಗಿದೆ. ನೆಟ್ಟಾರು ಹತ್ಯೆ, ಹಿಂದು ಹರ್ಷ ಹತ್ಯೆ ಪ್ರಕರಣಗಳಲ್ಲೂ ತಕ್ಷಣ ಆರೋಪಿಗಳ ಬಂಧನವಾಗಿದೆ. ಈಗ ಎನ್ ಐಎ ತನಿಖೆ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು. ರಾಜಕಾರಣ ಬಿಟ್ಟು ನಾಡಿನಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು. ರಾಜ್ಯ ಸರ್ಕಾರ ಗಂಭೀರ ಕ್ರಮಕೈಗೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ: ಉಡುಪಿ: ಸಾರ್ವಕರ್ ಫ್ಲೆಕ್ಸ್: ಬಿಜೆಪಿ ಯುವ ಮೋರ್ಚದಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ
ಇನ್ನೊಂದೆಡೆ ಆಸ್ಪತ್ರೆಯಲ್ಲಿ ಪ್ರೇಮ್ ಸಿಂಗ್ ಭೇಟಿ ನಂತರ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಈ ರೀತಿ ಮತ್ತೆ ಆಗಬಾರದೆಂದು ರಿಪಿಟ್ ಅಂತ ಮೊದಲ ಬಾರಿಗೆ ಫೈರಿಂಗ್ ಮಾಡಲಾಗಿದೆ. ಇದು ಕೇವಲ ಸ್ಯಾಂಪಲ್ ಪೈರಿಂಗ್ ಮಾತ್ರ ಮುಂದೆ ಇನ್ನು ಇದೆ. ರಾಷ್ಟ್ರ ದ್ರೋಹ ಮಾಡುವವರಿಗೆ ಹೆಚ್ಚಿನ ಬೆಲೆ ತೆತ್ತಬೇಕಾಗುತ್ತದೆ ಎಂದು ಹೇಳಿದರು.
ಭಾರತಿ ಜನತಾಪಾರ್ಟಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಂತೋಷ್ ಜೀ ರಾಘವೇಂದ್ರ ಜೊತೆ ಬಂದು ಭೇಟಿ ನೀಡಿದ್ದೇನೆ. ಮುಸ್ಲಿಂ ಗೂಂಡಾಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಪ್ರೇಮ್ ಸಿಂಗ್ ಚೇತರಿಕೆ ಆಗುತ್ತಿದ್ದಾನೆ. ಏನೇನೂ ಅಗಬೇಕು ಅದನ್ನು ನಾವು ಮಾಡುತ್ತೇವೆ.