Advertisement

 ಬಿ.ಸಿ.ರೋಡ್‌: ಪಿಂಕ್‌ ಶೌಚಾಲಯ : ಕಾಮಗಾರಿಗಿದ್ದ ಅಡೆತಡೆ ದೂರ

03:25 PM Jun 03, 2023 | Team Udayavani |

ಬಂಟ್ವಾಳ: ದ.ಕ.ಜಿಲ್ಲೆ ಯಲ್ಲೇ ಮೊದಲು ಎಂಬಂತೆ ಬಂಟ್ವಾಳ ಪುರಸಭೆಯ ವತಿಯಿಂದ ಬಿ.ಸಿ. ರೋಡ್‌ ನಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮಹಿಳೆಯರಿಗಾಗಿಯೇ ನಿರ್ಮಾಣ ಗೊಳ್ಳುತ್ತಿರುವ ಪಿಂಕ್‌ ಶೌಚಾಲಯ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವ ಕುರಿತು ಪುರಸಭೆ ಚಿಂತನೆ ನಡೆಸಿದೆ.

Advertisement

ಪುರಸಭೆಯು 2022ರ ಎಪ್ರಿಲ್‌ ತಿಂಗಳಲ್ಲಿ ಪಿಂಕ್‌ ಶೌಚಾಲಯದ ಕಾಮ ಗಾರಿ ಆರಂಭಿಸಿ ಜುಲೈ ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹಾಕಿ ಕೊಂಡಿತ್ತು. ಆದರೆ ಅದು ಬಿ.ಸಿ.ರೋಡ್‌ನ‌ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಿರ್ಮಾಣವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಕಾಮಗಾರಿಗೆ ತಡೆ ನೀಡಿ ಆದೇಶಿದ್ದರು.

ಬಳಿಕ ತಡೆ ತೆರವುಗೊಂಡು ಕಾಮಗಾರಿ ಆರಂಭಗೊಂಡ ಕೆಲವೇ ಸಮಯಗಳಲ್ಲಿ ಅದರ ಮುಂಭಾಗದಲ್ಲಿ ಕುಂಬಳಕಾಯಿ, ಕುಂಕುಮ ಮೊದಲಾದ ವಸ್ತುಗಳು ಪತ್ತೆ ಯಾಗಿ ವಾಮಚಾರದ ಶಂಕೆ ಎದುರಾಗಿತ್ತು. ಸ್ವಲ್ಪ ಸಮಯದ ಬಳಿಕ ಮತ್ತೆ ಕಾಮಗಾರಿ ತಡೆ ಬಂದಿದೆ ಎಂಬ ಮಾತುಗಳು ಕೇಳಿಬಂದಿದ್ದರೂ ಪುರಸಭೆಯ ಅಧಿಕಾರಿ ಗಳ ಮಾಹಿತಿ ಪ್ರಕಾರ ಯಾವುದೇ ತಡೆ ಇಲ್ಲ ಎನ್ನಲಾಗಿದೆ.

ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ಪಿಂಕ್‌ ಟಾಯ್ಲೆಟ್‌ನಲ್ಲಿ ಕೇವಲ ಶೌಚಾಲಯ ಮಾತ್ರ ಅನುಷ್ಠಾನಗೊಳ್ಳುತ್ತಿಲ್ಲ. ನಗರಕ್ಕೆ ಆಗ ಮಿಸಿದ ಮಹಿಳೆಯರ ಹಲವು ಸಮಸ್ಯೆ ಗಳಿಗೆ ಅಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಹಾಲುಣಿಸುವ ಮಕ್ಕಳಿ ರುವ ತಾಯಂದಿರು ನಗರಕ್ಕೆ ಆಗಮಿಸಿದರೆ ಅವರಿಗೆ ಹಾಲುಣಿಸುವುಕ್ಕೆ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಆದರೆ ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಈ ವ್ಯವಸ್ಥೆಯಲ್ಲಿ ಪ್ರತ್ಯೇಕವಾದ ಫೀಡಿಂಗ್‌ ಏರಿಯಾ ಇರುತ್ತದೆ.

ಬಿ.ಸಿ.ರೋಡ್‌ನ‌ಲ್ಲಿ ಪಿಂಕ್‌ ಶೌಚಾಲಯ ಅನುಷ್ಠಾನಗೊಳ್ಳುತ್ತಿರುವ ಸ್ಥಳದ ಪಕ್ಕದಲ್ಲೇ ತಾಲೂಕು ಕಚೇರಿ, ನ್ಯಾಯಾಲಯ ಸೇರಿದಂತೆ ಹಲವಾರು ಸರಕಾರಿ ಕಚೇರಿ ಗಳು ಇರುವುದರಿಂದ ಅಲ್ಲಿಗೆ ಆಗಮಿ ಸಿದ ಮಹಿಳೆಯರಿಗೆ ಈ ನೂತನ ವ್ಯವಸ್ಥೆ ಯಿಂದ ಅನುಕೂಲವಾಗಲಿದೆ. ಜತೆಗೆ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್‌ಕಿನ್‌ ವ್ಯವಸ್ಥೆಯೂ ಒಳಗೊಂಡಂತೆ ಪಿಂಕ್‌ ಟಾಯ್ಲೆಟ್‌ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ.

Advertisement

ಶೀಘ್ರ ಪೂರ್ಣಗೊಳಿಸುವ ಯೋಚನೆ
ಪಿಂಕ್‌ ಶೌಚಾಲಯದ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸುವ ಕುರಿತು ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಿದ್ದೇನೆ. ಪ್ರಸ್ತುತ ಕಾಮಗಾರಿಗೆ ಯಾವುದೇ ರೀತಿಯ ತಡೆ ಇರುವುದಿಲ್ಲ.
-ಲೀನಾ ಬ್ರಿಟ್ಟೋ,
ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next