Advertisement
ಅವರು ನ. 28ರ ರಾತ್ರಿಯಿಂದ ನಾಪತ್ತೆಯಾಗಿದ್ದು, ರಾತ್ರಿ ಕರೆ ಮಾಡಿ ನಾಳೆಯಿಂದ ನಾನು ಇಲ್ಲ ಎಂದು ಹೇಳಿದ್ದು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಂಶಯಿಸಲಾಗಿದೆ. ಸಾಲ ಬಾಧೆಯಿಂದ ಬಳಲುತ್ತಿದ್ದು, ಇದರಿಂದ ಮನನೊಂದಿದ್ದರು ಎನ್ನಲಾಗಿದೆ.
ಬಂಟ್ವಾಳ: ತಿಂಗಳ ಹಿಂದೆ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದ ಯಂತ್ರ ಢಿಕ್ಕಿಯಾಗಿ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೋಳಂಗಡಿ ನಿವಾಸಿ ಪದ್ಮನಾಭ ಶೆಣೈ (76) ನ. 26ರಂದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಐವರು ಪುತ್ರರನ್ನು ಅಗಲಿದ್ದಾರೆ.