ಕೊಪ್ಪಳ: ವಿಧಾನ ಪರಿಷತ್ ಸದಸ್ಯ ವಿಶ್ವನಾಥ ಅವರು ಪಕ್ಷದ ಶಾಸಕರಾಗಿದ್ದು, ಸಿಎಂ ಬಗ್ಗೆ ಹತಾಶೆಯಿಂದ ಆರೋಪ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈಗಾಗಲೇ ನೀರಾವರಿ ಇಲಾಖೆ ಹಾಗೂ ಸಿಎಂ ವಿರುದ್ಧ ವಿಶ್ವನಾಥ್ ಮಾಡಿರುವ ಆರೋಪಕ್ಕೆ ಸಿಎಂ ಸ್ಪಷ್ಢನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ
ಒಮ್ಮೆ ಪಕ್ಷಕ್ಕೆ ಬಂದು ಜನಾಭಿಪ್ರಾಯ ಪಡೆದು ನಾವು ಸಚಿವರಾಗಿದ್ದೇವೆ. ಸೊಸೆಯಾಗಿ ಮನೆಗೆ ಮಳಿ ಹೊಡೆದುಕೊಂಡು ಬಂದ ನಂತರ ಪಕ್ಷ ನಮ್ಮದು ಎಂದುಕೊಂಡಿದ್ದೇವೆ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ ಬೇರೆಯವರ ತಟ್ಟೆಯಲ್ಲಿ ನೊಣದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡದಂತೆ ಪಕ್ಷದಿಂದ ಸೂಚನೆ ಇದೆ ಹಾಗಾಗಿ ನಾನು ಆ ವಿಚಾರ ಮಾತನಾಡಲ್ಲ, ವಲಸಿಗ, ಮೂಲ ಶಾಸಕರ ಬಗೆಗಿನ ಹೇಳಿಕೆ ವಿಚಾರದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.