Advertisement

ನೂರಾರು ಕೋಟಿ ರೂ. ದಾನ ಮಾಡಿದ ಪರೋಪಕಾರಿಗಳು

12:30 AM Nov 04, 2021 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಕೋಟ್ಯಂತರ ರೂಪಾಯಿ ದಾನ ಮಾಡಿ, ಪರೋಪಕಾರದಲ್ಲಿ ಎತ್ತಿದ ಕೈ ಎನಿಸಿಕೊಂಡವರ ಪಟ್ಟಿಯನ್ನು ಹುರುನ್‌ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದೆ.

Advertisement

ಎಡೆಲ್‌ಗೀವ್‌ ಹುರುನ್‌ ಇಂಡಿಯಾ ಪರೋಪಕಾರಿಗಳ ಪಟ್ಟಿ 2021ರಲ್ಲಿಯೂ ಈ ಹಿಂದಿನ ವರ್ಷದಂತೆಯೇ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಅವರು ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.

ಈ ಒಂದು ವರ್ಷದಲ್ಲಿ ಬರೋಬ್ಬರಿ 11 ದಾನಿಗಳು 100 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು, 9,659 ಕೋಟಿ ರೂ. ದಾನವು 72 ದಾನಿಗಳಿಂದ ಬಂದಿದೆ.

ಇದನ್ನೂ ಓದಿ:ರಾಜ್ಯ ಸರ್ಕಾರದಿಂದ 7 ರೂ. ಗಳಷ್ಟು ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ

ಅಜೀಂ ಪ್ರೇಮ್‌ಜಿ ಅವರು ಕಳೆದ ವರ್ಷಕ್ಕಿಂತ ಈ ವರ್ಷ ಶೇ.23 ಹೆಚ್ಚು ದಾನ ನೀಡಿರುವುದು ಪಟ್ಟಿಯಿಂದ ತಿಳಿದುಬಂದಿದೆ. ಕಳೆದ ವರ್ಷವಿದ್ದ ಪಟ್ಟಿಯಲ್ಲಿ ಈ ವರ್ಷ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಸೇರಿ ಅನೇಕರು ಸೇರ್ಪಡೆಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next