Advertisement
ಈ ಕುರಿತಂತೆ ರಷ್ಯಾದ ಅಧ್ಯಕ್ಷ ಕಚೇರಿ ಕ್ರೆಮ್ಲಿನ್ ಪ್ರಕಟಣೆ ಹೊರಡಿಸಿದೆ. “ಗ್ರೊಜ್ನಿ ಪ್ರದೇಶದಲ್ಲಿ ಉಕ್ರೇನ್ನ ಡ್ರೋನ್ನಿಂದ ದಾಳಿ ನಡೆಸಲಾಗುತ್ತಿತ್ತು. ಅದನ್ನು ಹಿಮ್ಮೆಟ್ಟಿಸಲು ರಷ್ಯಾದ ವಾಯುಸೇನೆಯೂ ಪ್ರತಿದಾಳಿ ನಡೆಸುತ್ತಿತ್ತು. ಇದೇ ವೇಳೆ ವಿಮಾನ ಲ್ಯಾಂಡಿಂಗ್ಗಾಗಿ ಬರುತ್ತಿತ್ತು. ನಮ್ಮ ವಾಯುಪ್ರದೇಶದಲ್ಲೇ ಈ ದುರ್ಘಟನೆ ನಡೆದಿದ್ದು ವಿಷಾದನೀಯ’ ಎಂದು ಪುಟಿನ್ ಹೇಳಿದ್ದಾರೆ ಎಂದಿದೆ. ಆದರೆ, ಎಲ್ಲಿಯೂ ನಾವು ನಡೆಸುತ್ತಿದ್ದ ದಾಳಿಯಿಂದಲೇ ವಿಮಾನ ಪತನಕ್ಕೀಡಾಯ್ತು ಅಥವಾ ನಮ್ಮ ಕಡೆಯಿಂದ ಹಾರಿಸಿದ ಗುಂಡು ವಿಮಾನಕ್ಕೆ ತಾಗಿತು ಎಂಬ ಯಾವ ವಿಚಾರವನ್ನೂ ಕ್ರೆಮ್ಲಿನ್ ಉಲ್ಲೇಖೀಸಿಲ್ಲ. ದುರಂತಕ್ಕೆ ಬಾಹ್ಯ ವಸ್ತುವಿನ ದಾಳಿ ಕಾರಣ ಎಂದು ತಜ್ಞರು ಅಂದಾಜಿಸಿದ್ದರು. ಹಲವರು ಇದಕ್ಕೆ ರಷ್ಯಾ ದಾಳಿಯೇ ಕಾರಣ ಎಂದಿದ್ದರು. ಬೆನ್ನಲ್ಲೇ ಪುಟಿನ್ ಕ್ಷಮೆ ಯಾಚನೆ ಮಹತ್ವ ಪಡೆದಿದೆ. Advertisement
Putin Apologizes: ಅಜರ್ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
11:35 PM Dec 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.