Advertisement
ಸೋಮವಾರ (ಜು.18) ಸಂಜೆ 4ಕ್ಕೆ ರೈಲ್ವೆ ಮಂಡಳಿಯ ರೈಲ್ವೆ ಭವನದಿಂದ ಸಾಂಪ್ರದಾಯಿಕ ಸಪ್ತಾಹವನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೆ. ತ್ರಿಪಾಠಿ ಉದ್ಘಾಟಿಸಲಿದ್ದಾರೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ? ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಟಿಪ್ಪುವನ್ನು ಗುರುತಿಸುವ ಸಲುವಾಗಿ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ಸಪ್ತಾಹದಲ್ಲಿ ಟಿಪ್ಪು ಸುಲ್ತಾನ್ ಹೋರಾಟದ ಸ್ಮರಣಾರ್ಥ ಸ್ಥಳೀಯ ಸ್ವಾತಂತ್ರÂ ಹೋರಾಟಗಾರರು ಅಥವಾ ಅವರ ಕುಟುಂಬ ಸದಸ್ಯರು ಮೈಸೂರು ರೈnಜ ನಿಲ್ದಾಣದಲ್ಲಿ ಟಿಪ್ಪು ಎಕ್ಸ್‌ಪ್ರೆಸ್‌ಗೆ ಬಾವುಟ ತೋರಿಸುವ ಮೂಲಕ ರೈಲಿಗೆ ಚಾಲನೆ ನೀಡಲಿದ್ದಾರೆ. ಮೈಲಾರ ಮಹಾದೇವಪ್ಪ ನಿಲ್ದಾಣ
ಬ್ರಿಟಿಷ್ ಆಳ್ವಿಕೆ ವಿರುದ್ಧ ಕ್ರಾಂತಿಕಾರಿ ಕಾರ್ಯಗಳಿಗಾಗಿ ಮೈಲಾರ ಮಹಾದೇವಪ್ಪ ಅವರನ್ನು ಕರ್ನಾಟಕದ ಭಗತ್ ಸಿಂಗ್ ಎಂದೇ ಪ್ರಶಂಸಿಸಲಾಗಿತ್ತು. ದಂಡಿ ಮೆರವಣಿಗೆಯಲ್ಲಿ ಗಾಂಧೀಜಿಯವರೊಂದಿಗೆ ನಡೆದವರಲ್ಲಿ ಮಹಾದೇವಪ್ಪ ಮೈಸೂರು ಸಂಸ್ಥಾನದ ಏಕೈಕ ಪ್ರತಿನಿಧಿ. ಆರು ತಿಂಗಳು ಜೈಲು ಶಿಕ್ಷೆ ಬಳಿಕ ತಮ್ಮ ಕ್ರಾಂತಿಕಾರಿ ಸ್ನೇಹಿತರ ಜತೆಗೂಡಿ ಹಾವೇರಿ ಬಳಿಯ ಬ್ಯಾಡಗಿ ರೈಲು ನಿಲ್ದಾಣದ ಮೇಲೆ ದಾಳಿ ಮಾಡಿದ್ದರು. ಸಪ್ತಾಹದಲ್ಲಿ ಮಹದೇವಪ್ಪ ಮೈಲಾರ ಹಾವೇರಿ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜು ಮತ್ತು ಸ್ಥಳೀಯ ಜನರನ್ನೊಳಗೊಂಡು ವಾರಪೂರ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ.