Advertisement

Ayyanakatte School: ಅಕ್ಷರ ದಾಸೋಹದ ಸಾಮಗ್ರಿ ನಾಯಿಪಾಲು!

11:31 PM Jul 24, 2024 | Team Udayavani |

ಸುಳ್ಯ: ಅಯ್ಯನಕಟ್ಟೆ ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಅಕ್ಷರ ದಾಸೋಹಕ್ಕಾಗಿ ಆಹಾರ ಪದಾರ್ಥಗಳನ್ನು ಶಿಕ್ಷಕರಿಲ್ಲದ ಸಮಯದಲ್ಲಿ ಏಜೆನ್ಸಿಯವರು ತಂದು ಹಾಕಿದ್ದು, ಅವುಗಳನ್ನು ಬೀದಿ ನಾಯಿಗಳು ರಾತ್ರಿ ಚೆಲ್ಲಾಪಿಲ್ಲಿ ಮಾಡಿರುವುದು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಇದಕ್ಕೆ ಆಹಾರ ಸಾಮಗ್ರಿ ಪೂರೈಸುವ ಸಿಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಶಿಕ್ಷಕರು ಅಥವಾ ಎಸ್‌.ಡಿ.ಎಂ.ಸಿ.ಗಾಗಲೀ ಯಾವುದೇ ಮಾಹಿತಿ ನೀಡದೆ ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಜಗಲಿಯಲ್ಲಿ ಸಾಮಗ್ರಿಗಳನ್ನು ತಂದು ಹಾಕಿದ್ದು, ಇದನ್ನು ಮಕ್ಕಳಿಗೆ ಹೇಗೆ ನೀಡುವುದು ಎಂದು ಶಾಲೆಯವರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next