Advertisement
ಸುಮಾರು 75 ವರ್ಷ ಹಳೆಯದಾದ ಈ ಕೊಠಡಿಯು ತೀರಾ ಶಿಥಿಲಾವಸ್ಥೆಯಲ್ಲಿರುವುದರಿಂದ ದುರಸ್ತಿ ಅಸಾಧ್ಯ. ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ನೀಡಿರುವ ವರದಿಯಂತೆ ಈ ಕೊಠಡಿಯನ್ನು ಕೆಡವಲು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅನುಮತಿ ನೀಡಿದ್ದಾರೆ.
ಈ ಶಿಥಿಲಗೊಂಡ ಕಟ್ಟಡ ಅಪಾಯಕಾರಿಯಾಗಿದ್ದು, ಇಲ್ಲಿ ತರಗತಿ ನಡೆಸಲು ಸಾಧ್ಯವಿಲ್ಲ. ಈ ಕಟ್ಟಡವನ್ನು ಆದಷ್ಟು ಬೇಗ ತೆರವು ಮಾಡಿ, ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎನ್ನುವುದಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೂ ಮುನ್ನ ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಅವರು ಸ್ವತಹಃ ಇಲ್ಲಿಗೆ ಭೇಟಿ ನೀಡಿ, ವರದಿ ತಯಾರಿಸಿ, ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರು.
Related Articles
Advertisement
75 ವರ್ಷ ಹಳೆಯ ಕಟ್ಟಡಬೈಂದೂರು ವಲಯದ ಹಟ್ಟಿಯಂಗಡಿ ಸರಕಾರಿ ಹಿ.ಪ್ರಾ. ಶಾಲೆಯ ಈ ಕಟ್ಟಡವೂ ಸುಮಾರು 75 ವರ್ಷಗಳಿಗೂ ಹಿಂದಿನದ್ದಾಗಿದೆ. ಈ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳು ಇದೇ ಕಟ್ಟಡದಲ್ಲಿ ನಡೆಯುತ್ತಿದ್ದವು. ಪ್ರತೀ ಚುನಾವಣೆಯಲ್ಲೂ ಈ ಕಟ್ಟಡದಲ್ಲಿಯೇ ಮತಗಟ್ಟೆಯನ್ನು ತೆರೆಯಲಾಗುತ್ತಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಇಲ್ಲಿ ಮತಗಟ್ಟೆ ತೆರೆದಿರಲಿಲ್ಲ. ಈ ಕಟ್ಟಡದಲ್ಲಿ 3 ಕೊಠಡಿಗಳಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸಿಮೆಂಟ್ ಹಾಕಿರುವುದು ಎದ್ದು ಹೋಗಿ, ಕೆಲವೆಡೆಗಳಲ್ಲಿ ಗೋಡೆ ಮಾತ್ರ ಕಾಣುತ್ತಿದೆ.