Advertisement

Rabkavi Banhatti; ಬೀದಿ ಜಾನುವಾರು, ಕತ್ತೆ, ನಾಯಿಗಳಿಂದ ಹೈರಾಣದ ಜನತೆ

06:27 PM Sep 02, 2024 | Team Udayavani |

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ, ರಾಮಪುರ ಮತ್ತು ಹೊಸೂರಿನ ನಗರದ ಜನತೆ ಬೀದಿ ಜಾನುವಾರು, ಕತ್ತೆ ಮತ್ತು ಬೀದಿ ನಾಯಿಗಳಿಂದ ಹೈರಾಣಾಗಿದ್ದಾರೆ.

Advertisement

ಇದು ದಿನನಿತ್ಯದ ಸಮಸ್ಯೆಯಾಗಿದೆ. ಬನಹಟ್ಟಿ ಬಸ್ ನಿಲ್ದಾಣದ ಹತ್ತಿರದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ, ತಮ್ಮಣ್ಣಪ್ಪ ಚಿಕ್ಕೋಡಿ ರಸ್ತೆ ಮೇಲೆ ಮತ್ತು ರಬಕವಿಯ ಈಶ್ವರ ಸಣಕಲ್ ರಸ್ತೆ ಮಾರ್ಗದಲ್ಲಿ ಬೆಳೆಗ್ಗೆಯಿಂದ ಮಧ್ಯಾಹ್ನದವರೆಗೆ ಬೀದಿ ಜಾನುವಾರುಗಳು ಮಲಗಿಕೊಂಡು ರಸ್ತೆ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿವೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಇನ್ನೂ ಬಸ್ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ.

ಜಾನುವಾರುಗಳು ಮಲಗಿರುವುದರಿಂದ ಟ್ರಾಫಿಕ್ ಸಮಸ್ಯೆಯಾಗಿದೆ. ಬೀದಿ ಜಾನುವಾರುಗಳ ಜೊತೆಗೆ ಮನೆಯಲ್ಲಿ ಸಾಕಿರುವ ಜಾನುವಾರುಗಳು ಕೂಡಾ ಇವೆ.

ಇನ್ನೂ ನಗರದಲ್ಲಿ ಕತ್ತೆಗಳ ಕಾಟವಂತೂ ಬಹಳಷ್ಟಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಗರದ ಪ್ರಮುಖ ಬೀದಿ, ನೂಲಿನ ಗಿರಣಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ನಿಂತಿರುತ್ತವೆ. ಸ್ಥಳೀಯ ತಮ್ಮಣ್ಣಪ್ಪ ರಸ್ತೆಯ ಮೇಲೆ ನಗರಸಭೆಯ ಕಸ ಸಂಗ್ರಹಣೆಗಾಗಿ ಕಸವನ್ನು ಜಮಾವಣೆ ಮಾಡಿರುತ್ತಾರೆ. ಇಲ್ಲಿ ಬಹಳಷ್ಟು ಕತ್ತೆಗಳು ನಿಂತಿರುತ್ತವೆ.

content-img

ಇದರಿಂದಾಗಿ ದಿನಾಲು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ಈ ಕತ್ತೆಗಳ ಪೂರ್ತಿ ರಸ್ತೆಯನ್ನು ಆಕ್ರಮಿಸಿ ಕೊಂಡಿರುತ್ತವೆ. ತಿರುಗಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಇನ್ನೂ ಬೀದಿ ನಾಯಿಗಳಿಗೆ ಜನರು ಬೇಸತ್ತು ಹೋಗಿದ್ದಾರೆ. ಕತ್ತೆ ಮತ್ತ ಬೀದಿ ನಾಯಿಗಳಿಂದಾಗಿ ದಿನನಿತ್ಯ ಅಪಘಾತಗಳು ನಡೆಯುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಬಿದ್ದ ಪ್ರಕರಣಗಳು ಸಾಕಷ್ಟಾಗಿವೆ. ಸ್ಥಳೀಯ ಜೇಡರ ದಾಸಿಮಯ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅಂಗಡಿಕಾರರು ಸಂಜೆ ಕಸವನ್ನು ಹಾಕಿ ಹೋಗುತ್ತಿದ್ದಾರೆ. ಈ ಕಸವನ್ನ ತಿನ್ನಲು ಐವತ್ತಕ್ಕಿಂತ ಹೆಚ್ಚು ನಾಯಿಗಳು ಇಲ್ಲಿ ಸೇರಿರುತ್ತವೆ. ಇವು ಜಗಳವಾಡುತ್ತ ರಸ್ತೆಗೆ ಬರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಬೀದಿ ಜಾನುವಾರುಗಳು, ಕತ್ತೆ ಮತ್ತು ನಾಯಿಗಳಿಂದಾಗಿ ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
-ಗೌರಿ ಮಿಳ್ಳಿ ನಗರಸಭಾ ಸದಸ್ಯೆ

ಈಗಾಗಲೇ ಕತ್ತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಎರಡು ಸಭೆಯನ್ನು ಕೂಡಾ ಮಾಡಲಾಗಿದೆ. ಕೆಲವು ಬಾರಿ ದಂಡವನ್ನು ಕೂಡಾ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಸಭೆಯನ್ನು ಮಾಡಿ ಕತ್ತೆಯ ಮಾಲೀಕರಿಗೆ ಕಟ್ಟು ನಿಟ್ಟಾಗಿ ತಿಳಿಸುವುದರ ಜೊತೆಗೆ ಇನ್ನಷ್ಟು ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಗುವುದು.
-ಜಗದೀಶ ಈಟಿ ಪೌರಾಯುಕ್ತರು ರಬಕವಿ ಬನಹಟ್ಟಿ

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.