Advertisement

ಯೋಗ ಶಿಕ್ಷಕರು, ಸೆಂಟರ್‌ ಹುಡುಕಲು ಆ್ಯಪ್‌

12:07 AM Jun 02, 2019 | Team Udayavani |

ಹೊಸದಿಲ್ಲಿ: ಯೋಗ ಶಿಕ್ಷಕರು ಹಾಗೂ ಯೋಗ ಕೇಂದ್ರಗಳು ಸಮೀಪದಲ್ಲಿ ಎಲ್ಲಿವೆ ಎಂಬುದನ್ನು ಕಂಡುಕೊಳ್ಳಲು ಆಯುಷ್‌ ಸಚಿವಾಲಯವು ಆ್ಯಪ್‌ವೊಂದನ್ನು ಬಿಡುಗಡೆ ಮಾಡಿದೆ. ಜೂನ್‌ 21 ರ ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ ಈ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಯೋಗ ಕಾರ್ಯಕ್ರಮಗಳ ವಿವರಗಳೂ ಇದರಲ್ಲಿ ಲಭ್ಯವಿರುತ್ತದೆ.

Advertisement

ಯೋಗ ಲೊಕೇಟರ್‌ ಎಂಬ ಹೆಸರಿನ ಈ ಆ್ಯಪ್‌ ಅನ್ನು ಯೋಗ ಶಿಕ್ಷಕರೂ ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ಇದರಿಂದ ಹೆಚ್ಚಿನ ಜನರನ್ನು ಯೋಗದತ್ತ ಸೆಳೆಯಬಹುದು ಎದು ಆಯುಷ್‌ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ. ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಯೋಗ ಶಿಕ್ಷಕರಿದ್ದಾರೆ. ಇವರೆಲ್ಲರೂ ಇದರಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದಂದು ಬೃಹತ್‌ ಯೋಗ ಕಾರ್ಯಕ್ರಮ ನಡೆಸಲು ಮೈಸೂರು ಸೇರಿದಂತೆ ದೇಶದ ಐದು ನಗರಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಇದು ಪ್ರಧಾನಿಯಾಗಿ ಮೋದಿ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಹಮ್ಮಿಕೊಳ್ಳಲಾಗುವ ಅತಿದೊಡ್ಡ ಸಾರ್ವಜನಿಕ ಕಾರ್ಯಕ್ರಮವೂ ಆಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next