Advertisement

ರೋಗನಿರೋಧಕ ಶಕ್ತಿ ವೃದ್ಧಿಸುವ “ಆಯುಷ್‌ ಕ್ವಾಥಾ ಟೀ (ಟಿ)’; ಗ್ರೀನ್‌ ರೆಮೆಡೀಸ್‌ ಉತ್ಪನ್ನ

10:07 AM Jul 29, 2020 | mahesh |

ಉಡುಪಿ: ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು ಸೋಂಕಿನ ವಿರುದ್ಧ ಹೋರಾಡಲು ಆಯುಷ್‌ ಇಲಾಖೆಯು ಆಯುರ್ವೇದ ಔಷಧವನ್ನು ಸೂಚಿಸಿದ್ದು, ಅದರಂತೆ ಗ್ರೀನ್‌ ರೆಮೆಡೀಸ್‌ ಸಂಸ್ಥೆಯು “ಆಯುಷ್‌ ಕ್ವಾಥಾ ಟೀ (ಟಿ) (ಆಯುಷ್‌ ಕುಡಿನೀರ್‌)’ ಎನ್ನುವ ಈ ಔಷಧವನ್ನು ತಯಾರಿಸಿದೆ. ತುಳಸಿ, ದಾಲ್ಚಿನ್ನಿ, ಶುಂಠಿ ಮತ್ತು ಕರಿಮೆಣಸಿನ ಮಿಶ್ರಣವಾಗಿರುವ ಈ ಔಷಧ ಪ್ರಮುಖ ಮೆಡಿಕಲ್‌ ಸ್ಟೋರ್‌ಗಳಲ್ಲಿ ಲಭ್ಯ ಎಂದು ಪ್ರಕಟನೆ ತಿಳಿಸಿದೆ.

Advertisement

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌-19ಕ್ಕೆ ಇಷ್ಟರವರೆಗೆ ಯಾವುದೇ ಚಿಕಿತ್ಸೆಯಿಲ್ಲ ಹಾಗೂ ವಿಶ್ವಾದ್ಯಂತ ಎಲ್ಲರನ್ನು ಪರೀಕ್ಷೆಗೊಳ ಪಡಿಸುವುದು ಅಸಾಧ್ಯದ ಮಾತು. ಇದರಿಂದ ದೂರ ವಿರಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸ್ವ ರಕ್ಷಣೆಯೊಂದೇ ದಾರಿ. ಆಯುಷ್‌ ಕ್ವಾಥಾವು ರೋಗನಿರೋಧಕ ಸಾಮರ್ಥ್ಯ ವೃದ್ಧಿ ಸುವ ಮತ್ತು ಆ್ಯಂಟಿ ಆಕ್ಸಿಡೆಂಟ್‌ ಗುಣ ಗಳನ್ನು ಹೊಂದಿದೆ.

ಟೀ ಬ್ಯಾಗ್‌ ರೂಪದ ಔಷಧ
ಆಯಷ್‌ ಕ್ವಾಥಾ ಔಷಧ ಮಿಶ್ರಣವು ಟೀ ಬ್ಯಾಗ್‌ ರೂಪದಲ್ಲಿದ್ದು ಸ್ವಾದಿಷ್ಟವಾಗಿದೆ.ಅದನ್ನು ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಬಹುದು. ಬಿಸಿ ಚಹಾದ ರೂಪದಲ್ಲಿ ಸವಿಯುವುದರೊಂದಿಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next