Advertisement

ಆಯುಷ್‌ ಆಸ್ಪತ್ರೆ ಶಂಕುಸ್ಥಾಪನೆಗೆ ಬರುತ್ತಾರಾ ಆರೋಗ್ಯ ಸಚಿವರು?

07:35 AM May 26, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಆಯುಷ್‌ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾ ಶ್ರಯದಲ್ಲಿ 50 ಹಾಸಿಗೆಯ ಸಂಯುಕ್ತ ಆಯುಷ್‌ ಆಸ್ಪತ್ರೆ ಕಟ್ಟಡದ ಶಂಕು  ಸ್ಥಾಪನೆ  ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 10:30ಕ್ಕೆ ತಾಲೂಕಿನ ದೊಡ್ಡ ಮರಳಿ  ಗ್ರಾಪಂ ವ್ಯಾಪ್ತಿಯ ವರಮಲ್ಲೇನ ಹಳ್ಳಿಯಲ್ಲಿ ಆಯೋಜಿಸಲಾಗಿದೆ. ಶಂಕುಸ್ಥಾಪನೆ ನೆರವೇರಿಸಲು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಬರುತ್ತಾರೆಯೋ ಇಲ್ಲ ವೋ ಎಂಬು ವುದರ ಬಗ್ಗೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಸುಧಾಕರ್‌ ಜೊತೆ ವೈಮನಸ್ಸು: ಜಿಲ್ಲೆಯಲ್ಲಿ ಕೊರೊನಾ ಪರಾಮರ್ಶೆಗೆ ಆರೋಗ್ಯ ಸಚಿವರಾಗಿ ಇದುವರೆಗೂ ಎರಡು ಬಾರಿ ದಿನಾಂಕ ನಿಗದಿಪಡಿಸಿ ಕೊನೆ ಗಳಿಗೆಯಲ್ಲಿ ಜಿಲ್ಲೆಯ ಪ್ರವಾಸ ಮೊಟಕುಗೊಳಿಸಿರುವ ಸಚಿವ ಶ್ರೀರಾಮುಲು, ಇಂದಿನ ಕಾರ್ಯಕ್ರಮಕ್ಕೆ  ಬರುತ್ತಾರಾ ಅಥವಾ ಇಲ್ಲವಾ ಎನ್ನು ವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಹಾಗೂ ಶ್ರೀರಾಮುಲು ನಡುವೆ ವೈಮನಸ್ಸು ಇದೆಯೆಂಬ ಆರೋಪಗಳ ನಡುವೆ  ಇಂದಿನ ಕಾರ್ಯಕ್ರಮ ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವೈದ್ಯಕೀಯ ಶಿಕ್ಷಣ ಸಚಿವ ರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ವಹಿಸುವರು. ಶಂಕುಸ್ಥಾಪನೆ ಸಚಿವ ಶ್ರೀರಾಮುಲು, ಮುಖ್ಯ ಅಥಿತಿ ಗಳಾಗಿ  ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರ ಸಿಂಹಯ್ಯ, ಕ್ಷೇತ್ರದ ಸಂಸದ ಬಿ.ಎನ್‌.ಬಚ್ಚೇಗೌಡ, ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಭಾಗವಹಿಸುವರು. ವಿಶೇಷ ಅಥಿತಿಗಳಾಗಿ ಜಿಲ್ಲೆಯ ಶಾಸ ಕರು, ವಿಧಾನ ಪರಿಷತ್‌ ಸದಸ್ಯರು, ಜಿಪಂ ಹಾಗೂ ತಾಪಂ ಸದಸ್ಯರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next