Advertisement
ಕಾಮಧೇನು ಟೆಲಿ ಫಿಲಮ್ಸ್ ಅವರ ನೂತನವಾದ ಆಯುಷ್ ವಾಹಿನಿಯನ್ನು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತೀಯ ಪ್ರಾಚೀನ ವಿದ್ಯೆಗಳನ್ನು ಆಯುಷ್ ವಾಹಿನಿ ಮೂಲಕ ಪ್ರತಿದಿನ ಇಡೀ ವಿಶ್ವಕ್ಕೆ ಕಲಿಸಲಾಗುವುದು ಎಂದರು.
Related Articles
Advertisement
ಕೆಲವು ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆಗಳು ಎಲ್ಲಿದ್ದವು? ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದರೂ ಜನ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯ ಪದ್ಧತಿ ಆರಂಭಿಸಿದಾಗ ಕೆಲವರು ವಿರೋಧಿಸಿದರು. ಚಿಕಿತ್ಸೆಯ ಆಯ್ಕೆ ರೋಗಿಗಳಿಗೆ ಇರಲಿ ಎಂಬ ಕಾರಣಕ್ಕೆ ಎರಡೂ ರೀತಿಯ ಪದ್ಧತಿಯನ್ನು ಒದಗಿಸಿದ್ದೇವೆ. ಇದಕ್ಕೆ ಯಾರು ಅಡ್ಡಿಪಡಿಸಿದರೂ ನಾನು ಅಧಿಕಾರದಲ್ಲಿರುವವರೆಗೆ ಮುಂದುವರೆಸುತ್ತೇನೆ ಎಂದರು.ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಹಿಂದಿದ್ದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಈಗ ನೆನಪಿಸಿಕೊಳ್ಳುವಂತಾಗಿದೆ. ಪ್ರಕೃತಿಯೇ ಎಲ್ಲಕ್ಕೂ ಪರಿಹಾರ ಮತ್ತು ಚಿಕಿತ್ಸೆ ನೀಡುತ್ತದೆ. ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದಗಳು ಮನುಷ್ಯ ಹೇಗಿರಬೇಕು ಎಂಬುದನ್ನು ಪ್ರಾಚೀನ ಕಾಲದಲ್ಲಿಯೇ ಹೇಳಿದೆ. ನಮ್ಮ ಗುರು, ಹಿರಿಯರು ನೂರಾರು ವರ್ಷ ಬಾಳಿ, ಬದುಕಿದ ನಿದರ್ಶನ ನಮ್ಮ ಮುಂದಿದೆ. ಪಾಶ್ಚಾತ್ಯ ಪದ್ಧತಿಗಳನ್ನು ಇಲ್ಲಿಗೆ ತರುವುದರ ಜತೆಗೆ ಅಲ್ಲಿನ ರೋಗಗಳನ್ನು ತರಲಾಗಿದ್ದು, ನಮ್ಮ ಪ್ರಾಚೀನ ಪದ್ಧತಿ ಅಳವಡಿಸಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಎನ್.ಎ.ಹ್ಯಾರೀಸ್, ಪದ್ಮಭೂಷಣ ಪುರಸ್ಕೃತರಾದ ಡಾ.ಬಿ.ಎಂ.ಹೆಗ್ಡೆ, ಡಾ.ವಿ.ಆರ್.ಗೌರಿಶಂಕರ್, ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್, ಆಯುಷ್ ಟಿವಿಯ ರಾಯಭಾರಿಯೂ ಆಗಿರುವ ಚಿತ್ರನಟ ಉಪೇಂದ್ರ, ಪ್ರಶಾಂತಿ ಆಯುರ್ವೇದಿಕ್ ಕೇಂದ್ರದ ಡಾ.ಗಿರಿಧರ್ ಕಜೆ, ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಆಯುಷ್ ಇಲಾಖೆ ನಿರ್ದೇಶಕ ರಾಜ್‌ಕಿಶೋರ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಸ್ತಾ ಟಿವಿಯಲ್ಲಿ ಹಿಂದಿಯಲ್ಲಿ ಮಾತ್ರ ಯೋಗ ಹೇಳಿಕೊಡುತ್ತಿದ್ದೆ. ಫೆ.1ರಿಂದ ಪ್ರತಿದಿನ ಆಯುಷ್ ವಾಹಿನಿಯಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಧ್ಯಾನ, ಆಧ್ಯಾತ್ಮ, ಯೋಗ, ಪ್ರಾಣಾಯಾಮ ವಿದ್ಯೆಗಳನ್ನು ಹೇಳಿಕೊಡಲಾಗುವುದು.
– ಬಾಬಾ ರಾಮ್‌ದೇವ್, ಯೋಗಗುರು.