ಮೂಡುಬಿದಿರೆ: ನೂತನ ಶಿಕ್ಷಣ ನೀತಿಯು ಕೌಶಲಾಧಾರಿತ ವಾಗಿದ್ದು ಇದನ್ನು ಪರಿಣಾಮಕಾರಿ ಯಾಗಿ ಅನುಸರಿಸಿ, ರೂಢಿಸಿಕೊಳ್ಳುವ ಮೂಲಕ ಆಯುರ್ವೇದ ಬೋಧನೆ, ಸಂವಹನ ಮತ್ತು ಚಿಕಿತ್ಸೆಯ ಆಯಾಮಗಳಲ್ಲಿ ಯಶಸ್ಸು ಸಾಧಿಸಲು ಖಂಡಿತ ಸಾಧ್ಯವಿದೆ ಎಂದು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ| ಎ.ಎಸ್. ಪ್ರಶಾಂತ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಮಂಗಳವಾರ ನಡೆದ ಧನ್ವಂತರಿ ಪೂಜಾ ಮಹೋತ್ಸವ, ಶಿಷೊÂàಪನಯನ ಸಂಸ್ಕಾರ, ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಆಳ್ವಾಸ್ ಧನ್ವಂತರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ, ಕಿನ್ನಿಕಂಬಳದ ಆಯುರ್ವೇದ ಚಿಕಿತ್ಸಾ ತಜ್ಞ ಡಾ| ಶ್ರೀಪತಿ ಕಿನ್ನಿಕಂಬಳ, ಡಾ| ಎ.ಎಸ್. ಪ್ರಶಾಂತ್ ಮತ್ತು ಮಂಗಳೂರಿನ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ| ಸಂದೀಪ್ ಬೇಕಲ್ ಆರ್. ಅವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನಗೈದರು.
ಡಾ| ಮೋಹನ ಆಳ್ವ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ಆಯುರ್ವೇದ ವಿದ್ಯಾ ರ್ಥಿಗಳು ಸತ್ಯದ ಸಂಶೋಧನೆಗೆ ಒತ್ತುಕೊಡಬೇಕು. ವಿಜ್ಞಾನದ ಬಹುಮುಖ ಗಳು, ಕಲೆ, ಸಂಸ್ಕೃತಿ, ಕ್ರೀಡೆ, ಮಾನವಿಕ ವಿಷಯಗಳೂ ಒಳಗೊಂಡಂತೆ ಎಲ್ಲದರ ಪರಿಚಯ, ಸಂಸರ್ಗ ಇದ್ದಾಗ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು. ಅಕಾಡೆಮಿಕ್ ಎಕ್ಸಲೆನ್ಸ್ ಪುರಸ್ಕಾರ 2017ರ ಬಿಎಎಂಎಸ್. ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತ ಡಾ| ವಿಷ್ಣು ಆರ್., ಚಿನ್ನದ ಪದಕ ಪಡೆದ, 2021ರ ಉತ್ತಮ ಸಾಧನೆಯ ನಿರ್ಗಮನ ವಿದ್ಯಾರ್ಥಿ ಡಾ| ಸಾಯಿ ಚಿನ್ಮಯಿ ಟಿ., ಎಂ.ಡಿ. ಆಯುರ್ವೇದ ಪಂಚಕರ್ಮದಲ್ಲಿ ಚಿನ್ನದ ಪದಕ ಪಡೆದ ಡಾ| ಲಿಫಾಮ್ ರೋಶನಾರ ಅವರನ್ನು “ಆಳ್ವಾಸ್ ಅಕಾಡೆಮಿಕ್ ಎಕ್ಸ್‌ಲೆನ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಾರ್ಷಿಕ ನಿಯತಕಾಲಿಕೆ “ಚಿರಂತನ’ ಬಿಡುಗಡೆ, ಕ್ರೀಡೋತ್ಸವದಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಲಾಪ ನಡೆದವು.
ಯುಜಿ ಡೀನ್ ಡಾ| ಪ್ರಶಾಂತ್ ಜೈನ್ ವಾರ್ಷಿಕ ವರದಿ ವಾಚಿಸಿದರು. ಪಿಜಿ ಡೀನ್ ಡಾ| ರವಿಪ್ರಸಾದ ಹೆಗ್ಡೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು, ಡಾ| ಸ್ವಪ್ನಕುಮಾರಿ, ಡಾ| ಕೃಷ್ಣಮೂರ್ತಿ, ಡಾ| ವಿಜಯಲಕ್ಷ್ಮೀ ಸಮ್ಮಾನ ಪತ್ರಗಳನ್ನು ವಾಚಿಸಿದರು. ಪ್ರಾಚಾರ್ಯ ಡಾ| ಸಜಿತ್ ಎಂ. ಸ್ವಾಗತಿಸಿ, ಡಾ| ಗೀತಾ ಎಂ.ಬಿ. ನಿರೂಪಿಸಿದರು. ವೈದ್ಯಕೀಯ ಅ ಧೀಕ್ಷಕ ಡಾ| ಮಂಜುನಾಥ ಭಟ್ ವಂದಿಸಿದರು.