Advertisement

ಉತ್ತಮ ಆರೋಗ್ಯಕ್ಕೆ ಆಯುರ್ವೇದ ಮದ್ದು; ಸೋಮಶೇಖರ

02:42 PM Feb 15, 2023 | Team Udayavani |

ಬಾಗಲಕೋಟೆ : ಉತ್ತಮ ಆರೋಗ್ಯಕ್ಕೆ ಆಯುರ್ವೇದ ಮದ್ದಾಗಿದ್ದು, ಆಯುಷ ಇಲಾಖೆಯ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಚಿಕ್ಕಯರನಕೇರಿ ಗ್ರಾಮದ ಮುಖಂಡ ಸೋಮಶೇಖರ ಬಲಕುಂದಿ ಹೇಳಿದರು.

Advertisement

ಹುನಗುಂದ ತಾಲೂಕಿನ ಚಿಕ್ಕಯರನಕೇರಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ ಇಲಾಖೆ, ಕರಡಿಯ ತಕ್ಷಶಿಲಾ ಸಾಮಾಜಿಕ ಹಾಗೂ ಮಹಿಳಾ ಅಭಿವೃದ್ದಿ ಸಂಸ್ಥೆ, ನಾಗೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಆಯುಷ ಸೇವಾ ಗ್ರಾಮ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಆರೋಗ್ಯವನ್ನು ಹಣದಿಂದ ಕೊಳ್ಳಲು ಸಾದ್ಯವಿಲ್ಲ. ಈ ಹಿಂದೆ ರೋಗ ರುಜಿನಗಳ ಪ್ರಮಾಣ ಕಡಿಮೆ ಇತ್ತು. ಏಕೆಂದರೆ, ಸತ್ವಯುತ, ಪೌಷ್ಟಿಕ ಆಹಾರ ಸೇವಿಸುತ್ತಿದ್ದರು. ಯೋಗ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಮಾತನಾಡಿ, ಸತ್ವಯುತ ಆಹಾರ ಸೇವನೆ, ವ್ಯಾಯಾಮ ಧ್ಯಾನ ವಿಹಾರ ದಿನನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಾವುದೇ ರೋಗಗಳು ಬರುವುದಿಲ್ಲ. ನಮ್ಮ ಆಯುಷ್‌ ವೈದ್ಯಾ ಕಾರಿಗಳು 15 ದಿನಕ್ಕೊಮ್ಮೆ ತಮ್ಮ ಊರಿಗೆ ಬಂದು ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಿದ್ದಾರೆ.

ಯೋಜನಾ ಘಟಕಗಳಾದ ಮನೆ ಮದ್ದು ಪ್ರಾತ್ಯಕ್ಷಿಕೆ, ಆಯುಷ್‌ ಅರಿವು ಕಾರ್ಯಕ್ರಮ, ಔಷಧಿ ಸಸ್ಯಗಳ ಮಾಹಿತಿ ಹಾಗೂ ವಿತರಣೆ, ಆಯುಷ್‌ ಐಇಸಿ ವಸ್ತುಗಳ ವಿತರಣೆ, ದಿನಚರ್ಯ ಮತ್ತು ಯೋಗಾಭ್ಯಾಸ ಮಾಡಿಸಲಾಗುತ್ತದೆ. ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು. ಆರೋಗ್ಯ ಸಹಾಯಕ ಸಣಕಲ್ಲ ಮಾತನಾಡಿ, ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಚಿಕುನ್‌ ಗುನ್ಯಾ ರೋಗದಿಂದ ಬಳಲುತ್ತಿದ್ದು, ನೀರಿನ ಪರಿಕರಗಳನ್ನು 2-3 ದಿನಕ್ಕೊಮ್ಮೆ ಸ್ವಚ್ಛವಾಗಿಟ್ಟುಕೊಂಡರೆ ಡೆಂಗ್ಯೂ ಚಿಕುನ್‌ ಗುನ್ಯಾ ತಡೆಗಟ್ಟಬಹುದು.

Advertisement

ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಈ ರೋಗಗಳು ಅನಿಯಮಿತ ಜೀವನ ಶೆ„ಲಿ, ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡದಿಂದ ಬರುತ್ತವೆ. ಆದರೆ ಸರಿಯಾದ ಜೀವನ ಶೆ„ಲಿ, ಆಹಾರ ಪದ್ಧತಿ ಮತ್ತು ಮನಸ್ಸನ್ನು ಪ್ರಸನ್ನವಾಗಿಟ್ಟುಕೊಂಡಲ್ಲಿ ಈ ಅಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದಾಗಿದೆ ಎಂದರು.

ಕಾರ್ಯಕ್ರಮವನ್ನು ರಕ್ಕಸಗಿ ಗ್ರಾ.ಪಂ ಸದಸ್ಯ ಯಲಗೂರಪ್ಪ ಗರೇಬಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಸೋಮಪ್ಪಾ ಪೂಜಾರಿ, ಶಂಕರಗೌಡ ಗೌಡರ, ಶುಶ್ರೂಷ ಅಧಿಕಾರಿ ಸಿದ್ದಲಿಂಗ ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಆಯುಷ ಇಲಾಖೆಯ ತಾಲೂಕಾ ಅಧಿಕಾರಿ ಡಾ|ಚಂದ್ರಕಾಂತ ರಕ್ಕಸಗಿ ಎಲ್ಲರನ್ನು ಸ್ವಾಗತಿಸಿದರು. ಚಿತ್ತವಾಡಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ|ಶಿವಾನಂದ ನಿಡಗುಂದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next