Advertisement

ಕೋವಿಡ್ ವೈರಸ್ ಮಣಿಸಲು ಆಯುರ್ವೇದವೇ ಸಶಕ್ತ ; ಇಲ್ಲಿದೆ ಸರಳ ಉಪಾಯಗಳು

03:59 PM Apr 06, 2020 | Hari Prasad |

ನವದೆಹಲಿ: ಕೋವಿಡ್ 19 ಮಹಾಮಾರಿಯನ್ನು ಮಣಿಸುವಲ್ಲಿ, ಎಲ್ಲ ಪ್ರಕಾರದ ಔಷಧಗಳೂ ಸೋಲನ್ನಪ್ಪಿವೆ. ಕೊನೆಗೆ ಈಗ ತಜ್ಞರು ‘ಆಯುರ್ವೇದ ಮಾತ್ರವೇ ಈ ಮಾರಕ ವೈರಸ್ ವಿರುದ್ಧ ಹೋರಾಡಲು ಸಶಕ್ತ’ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ.

Advertisement

ಸೋಂಕಿತನಿಗೆ ರೋಗ ನಿರೋಧಕ ಶಕ್ತಿ ಅಧಿಕವಿದ್ದರಷ್ಟೇ ಆತ ಬೇಗನೆ ಚೇತರಿಸಿಕೊಳ್ಳಬಲ್ಲ. ಈ ರೋಗ ನಿರೋಧಕ ಶಕ್ತಿಯು ಆಯುರ್ವೇದವು ಪ್ರಧಾನವಾಗಿ ಸೂಚಿಸುವಂಥ ತುಳಸಿ, ದಾಲ್ಚಿನ್ನಿ, ಕಾಳುಮೆಣಸು, ಒಣಶುಂಠಿ, ಒಣ ದ್ರಾಕ್ಷಿಗಳಿಂದ ಹೆಚ್ಚು ಸಿಗುತ್ತದೆ. ಅಲ್ಲದೆ ಯೋಗ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವೈದ್ಯವಿಜ್ಞಾನಿಗಳು.

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ, ಆಯುರ್ವೇದದ ಪ್ರಯೋಜನಗಳ ಮಾರ್ಗಸೂಚಿ ಸಿದ್ಧಪಡಿಸುವಂತೆ, ಆಯುಷ್‌ ಇಲಾಖೆಗೆ ಸೂಚಿಸಿದ್ದರು. ಅದರಂತೆ ಬಿಸಿ ನೀರು ಸೇವನೆ, ಯೋಗಾಸನ, ಪ್ರಾಣಾಯಾಮ, 30 ನಿಮಿಷಗಳ ಧ್ಯಾನವನ್ನು ನಿತ್ಯ ಪಾಲಿಸುವಂತೆ ಇಲಾಖೆ, ಜನರಿಗೆ ಸಲಹೆ ನೀಡಿತ್ತು. ಅಲ್ಲದೆ, ಅಡುಗೆ ವೇಳೆ ಅರಿಶಿನ, ಜೀರಿಗೆ, ಕೊತ್ತಂಬರಿ, ಬೆಳ್ಳುಳ್ಳಿ ಬಳಕೆ ಹಾಗೂ ಬೆಲ್ಲದಿಂದ ಮಾಡಿದ ಲಿಂಬೆ ಹಣ್ಣಿನ ಜ್ಯೂಸ್‌ ಅನ್ನು ಸೇವಿಸುವಂತೆ ತಿಳಿಸಿತ್ತು. ಈ ಎಲ್ಲ ಪದಾರ್ಥಗಳು ಕೋವಿಡ್ ವೈರಸ್ ಕಾಟವನ್ನು ತಡೆಯಲು ಸಶಕ್ತವಾಗಿವೆ ಎನ್ನುವುದು ಆಯುರ್ವೇದದ ಸಲಹೆ ಕೂಡ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next