Advertisement

ರಚಿತಾ ರಾಮ್‍ಗೆ ಏನಮ್ಮಿ ಏನಮ್ಮಿ ಎಂದ “ಅಯೋಗ್ಯ’: Watch

04:18 PM Jul 09, 2018 | |

ಸತೀಶ್‌ ನೀನಾಸಂ ಅಭಿನಯದ ಬಹುನಿರೀಕ್ಷಿತ “ಅಯೋಗ್ಯ’ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಏನಮ್ಮಿ ಏನಮ್ಮಿ ಯಾರಮ್ಮಿ ನಿನಮ್ಮಿ’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಹಾಡಿಗೆ ಚೇತನ್ ಕುಮಾರ್(ಭರ್ಜರಿ) ಸಾಹಿತ್ಯ ರಚಿಸಿದ್ದು, ವಿಜಯ್ ಪ್ರಕಾಶ್ ಮತ್ತು ಪಾಲಕ್ ಮುಚ್ಚಾಲ್ ಹಾಡನ್ನು ಹಾಡಿದ್ದಾರೆ. 

Advertisement

ಈ ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಪಾತ್ರದಲ್ಲಿ ಸತೀಶ್‌ ನೀನಾಸಂ ಕಾಣಿಸಿಕೊಂಡಿದ್ದು, ಅಯೋಗ್ಯನೊಬ್ಬ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಹೇಗೆ ಯೋಗ್ಯನಾಗಿ ಬದಲಾಗುತ್ತಾನೆ ಎನ್ನುವುದು ಕಥೆ. ರಚಿತಾ ರಾಮ್‌ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಸತೀಶ್​, ಸಿದ್ದೇಗೌಡನ ಪಾತ್ರದಲ್ಲಿ ನಟಿಸಿದರೆ, ಖಡಕ್ ವಿಲನ್ ಬಚ್ಚೇಗೌಡನಾಗಿ ರವಿಶಂಕರ್ ನಟಿಸಿದ್ದಾರೆ.

ರವಿಶಂಕರ್‌ರಂತಹ ದೈತ್ಯ ನಟನ ಎದುರು ನಟಿಸಬೇಕಾದರೆ, ಹೈಟ್‌ ಇಲ್ಲದಿದ್ದರೂ, ಫಿಟ್‌ ಆಗಿರಬೇಕು ಎನ್ನುವ ಕಾರಣಕ್ಕೆ, ಸತೀಶ್‌ ನೀನಾಸಂ ದೇಹವನ್ನು ಹುರಿಗೊಳಿಸಿರುವುದು ವಿಶೇಷ. ಚಿತ್ರಕ್ಕೆ ಯೋಗರಾಜ್‌ ಭಟ್‌ ಶಿಷ್ಯ ಮಹೇಶ್‌ ಕುಮಾರ್‌ ಕಥೆ ಬರೆದು ನಿರ್ದೇಶಿಸಿದರೆ, ಟಿ.ಆರ್‌. ಚಂದ್ರಶೇಖರ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅಲ್ಲದೇ ಶರತ್ ಚಕ್ರವರ್ತಿ ಸಂಭಾಷಣೆ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದ್ದು, ಪ್ರೀತಮ್‌ ತೆಗ್ಗಿನಮನೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ, ಸರಿತ, ರವಿಶಂಕರ್‌, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಸೇರಿದಂತೆ ದೊಡ್ಡ ತಾರಾಬಳಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next