Advertisement

Ayodhya; ಬಾಲರಾಮನಿಗೆ ಇನ್ನು ಬೆಚ್ಚಗಿನ ಅಲಂಕಾರ!

01:17 AM Nov 11, 2024 | Team Udayavani |

ಅಯೋಧ್ಯೆ: ಚಳಿಗಾಲದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದ ಬಾಲ ರಾಮನನ್ನು ಬೆಚ್ಚಗಿಡುವ ಸಲುವಾಗಿ, ಮೂರ್ತಿಯ ಅಲಂಕಾರ ಮತ್ತು ನೈವೇದ್ಯ ಬದಲಾಯಿಸಲಾಗುತ್ತಿದೆ. ಮಗು­ವಿನ ರೂಪದಲ್ಲಿ ಪ್ರತಿಷ್ಠಾಪಿ ಸಲಾ­ಗಿರುವ ಮೂರ್ತಿ ಕಾರಣ ಮಕ್ಕ­ಳಂತೆಯೇ ನೋಡಿಕೊಳ್ಳ ಲಾಗುತ್ತದೆ. ಬಾಲರಾಮನ ನೈವೇದ್ಯ ಮತ್ತು ವಸ್ತ್ರಗಳ ಕುರಿತೂ ಕಾಳಜಿ ವಹಿಸ ಲಾಗುತ್ತದೆ. ಮೂರ್ತಿಯನ್ನು ಮತ್ತು ದೇವಾಲಯದ ಪ್ರಾಂಗಣವನ್ನು ಬೆಚ್ಚಗಿಡಲು ಹೀಟರ್‌ಗಳ ವ್ಯವಸ್ಥೆ ಮಾಡಲಾಗುತ್ತದೆ.

Advertisement

ನ.20ರ “ಅಗಾØನ್‌ ಪಂಚಮಿ’ (ವಿವಾಹ ಪಂಚಮಿ)ಯಂದು ಈ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮೊದಲಿಗೆ ಮೂರ್ತಿಗೆ ಬೆಚ್ಚಗಿನ ನೀರಿನಲ್ಲಿ ಅಭಿಷೇಕ ನೆರವೇರಿಸಲಾಗುತ್ತದೆ. ಬಳಿಕ ಹೊದಿಕೆ­, ಪಶ್ಮಿನಾ ಶಾಲುಗಳು ಮತ್ತು ಉಣ್ಣೆಯ ವಸ್ತ್ರಗಳನ್ನು ಹೊದಿಸಲಾಗುತ್ತದೆ ಅಲ್ಲದೇ ಎಂದಿನಂತೆ ಮೊಸ ರಿನ ಬದಲಾಗಿ ಒಣ­ಹಣ್ಣುಗಳನ್ನು ಮತ್ತು ರಾಬ್ರಿ-ಖೀರ್‌ ಅನ್ನು ಬಾಲರಾಮನಿಗೆ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ ಎಂದು ದೇಗು­ಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದಾರೆ. ಹೊಸದಿಲ್ಲಿ ಮೂಲದ ವಿನ್ಯಾಸಕರು ಚಳಿಗಾಲದ ವಸ್ತ್ರಗಳನ್ನು ಬಾಲರಾಮನಿ­ಗಾಗಿ ಸಿದ್ಧಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next