Advertisement
ಗುರುವಾರ ದಿಲ್ಲಿಯಲ್ಲಿ ನಡೆದ ರಾಜ್ಯ ಘಟಕಗಳ ನಾಯಕರ ಸಭೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ಯಾವುದೇ ಕಟ್ಟುಪಾ ಡುಗಳಿಲ್ಲ, ಮಂದಿರದಲ್ಲಿ ಪ್ರಾರ್ಥನೆ ಸಲ್ಲಿ ಸಲು ಬಯಸುವ ಯಾರಾದರೂ ಹೋಗ ಬಹುದು ಎಂದು ಹೇಳಿದ್ದಾರೆಂದು ಮೂಲ ಗಳು ತಿಳಿಸಿವೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿರುವ ಕಾಂಗ್ರೆಸ್ ನಾಯಕರು ತಾವು ಸಮಾರಂಭದಲ್ಲಿ ಭಾಗಿಯಾಗಬೇಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಪಕ್ಷವನ್ನು ಕೋರಿದ್ದ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.
ಇಡೀ ದೇಶ ಕುತೂಹಲದಿಂದ ಕಾಯುತ್ತಿರುವ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ನಡೆಯುತ್ತಿದೆ. ಆದರೆ ಹೆಚ್ಚು ಜನರಿಗೆ ತಿಳಿಯದ ಇನ್ನೊಂದು ರಾಮಮಂದಿರ ತಲೆ ಎತ್ತುತ್ತಿದೆ. ಅದು ಜಗತ್ತಿನ ಅತ್ಯಂತ ದೊಡ್ಡ ರಾಮಮಂದಿರವಾಗಲಿದೆ. ಬಿಹಾರದ ಚಂಪಾರಣ್ ಜಿಲ್ಲೆಯ ಮಹಾವೀರ್ ಮಂದಿರ ಟ್ರಸ್ಟ್ ಈ ಸಾಹಸಕ್ಕೆ ಕೈ ಹಾಕಿದ್ದು, ಈ ದೇವಳಕ್ಕೆ 500 ಕೋಟಿ ಖರ್ಚಾಗಲಿದೆ. 2025ರಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾಂಬೋಡಿಯಾ ಅಂಕರ್‌ವಾಟ್ ದೇವಾಲಯಕ್ಕಿಂತ ಎತ್ತರ ಇರುತ್ತದೆಯಂತೆ. ಯಾತ್ರಿಕರ ವಸತಿಗೆ “ಹೋಲಿ ಆ್ಯಪ್ ‘
ಅಯೋಧ್ಯೆಗೆ ಬರುವ ಯಾತ್ರಾರ್ಥಿಗಳು ವಸತಿ ವ್ಯವಸ್ಥೆಗಳನ್ನು ಹುಡುಕಲು ಅನುಕೂಲವಾಗುವ ನಿಟ್ಟಿನಲ್ಲಿ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ” ಹೋಲಿ ಅಯೋಧ್ಯಾ’ ಎನ್ನುವ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸಿದೆ. ಹೋಂ ಸ್ಟೇ, ಹೊಟೇಲ್‌ಗಳ ಹುಡುಕಾಟಕ್ಕೆ ಯಾವುದ್ಯಾವುದೋ ಪ್ಲಾಟ್‌ಫಾರ್ಮ್ಗಳಲ್ಲಿ ಪರದಾಡುವ ಬದಲಿಗೆ ಇನ್ನುಮುಂದೆ ಈ ಆ್ಯಪ್ ಮೂಲಕವೇ ಹೋಂ ಸ್ಟೇಗಳನ್ನು ಬುಕ್ ಮಾಡಬಹುದಾಗಿದೆ. ಈಗಾಗಲೇ 500 ಬಿಲ್ಡಿಂಗ್‌ಗಳು ಇದರಲ್ಲಿ ನೋಂದಾಯಿಸಿಕೊಂಡಿದ್ದು, 2,200ಕ್ಕೂ ಅಧಿಕ ರೂಮ್‌ಗಳ ಸೌಲಭ್ಯವನ್ನು ಪ್ರಸಕ್ತ ಹೊಂದಿದೆ.
Related Articles
ಜ.22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಕ್ತಾದಿಗಳಿಗೆ ಹಂಚುವುದಕ್ಕಾಗಿ 1 ಲಕ್ಷ ಲಡ್ಡುಗಳನ್ನು ತಿರುಮಲ ತಿರುಪತಿ ದೇಗುಲದಿಂದ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ. ಈ ಕುರಿತು ತಿರುಮಲ ತಿರುಪತಿ ದೇಗುಲ ಆಡಳಿತ ಮಂಡಳಿ (ಟಿಟಿಡಿ) ಮಾಹಿತಿ ನೀಡಿದ್ದು, ಪ್ರತೀ ಲಡ್ಡು 25 ಗ್ರಾಂ ತೂಕವಿರುವಂತೆ ಒಟ್ಟು 1 ಲಕ್ಷ ಲಡ್ಡುಗಳನ್ನು ಮಂದಿರ ಸಮಾರಂಭಕ್ಕಾಗಿ ಕಳುಹಿಸಿಕೊಡುತ್ತಿದ್ದೇವೆ ಎಂದು ತಿಳಿಸಿದೆ.
Advertisement
ಅಯೋಧ್ಯೆ ಸಂಭ್ರಮಕ್ಕೆ ರಾಜಧಾನಿ ಸಜ್ಜುರಾಮ ಜನ್ಮಭೂಮಿಯಲ್ಲಿ ಮಂದಿರ ಉದ್ಘಾಟನೆಯ ಸಮಾರಂಭ ಕಳೆಕಟ್ಟಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲೂ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈಗಾಗಲೇ ದಿಲ್ಲಿಯ ಹಲವು ದೇವಾಲಯಗಳು ಸುಣ್ಣ-ಬಣ್ಣಗಳಿಂದ ಅಲಂಕೃತಗೊಳ್ಳುತ್ತಿವೆ. ಇನ್ನೂ ಕೆಲವು ಮಂದಿರಗಳ ಆಡಳಿತ ಮಂಡಳಿಗಳು ಖುದ್ದು ಅಯೋಧ್ಯೆಯಲ್ಲೇ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡುತ್ತಿವೆ.