ಅಯೋಧ್ಯೆ: ಯಾವ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ನಾವು ಸಂಕಲ್ಪ ತೊಟ್ಟೆವೋ, ಅದೇ ಸ್ಥಳದಲ್ಲೇ ಇಂದು ರಾಮ ಮಂದಿರ ನಿರ್ಮಾಣವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಅಯೋಧ್ಯೆಯ ರಾಮ ಮಂದಿರ ಲೋಕರ್ಪಾಣೆ ಸಮಾ ರಂಭ ಉದ್ದೇಶಿಸಿ ಮಾತನಾಡಿದ ಅವರು, “ಇನ್ನು ಮುಂದೆ ಅಯೋಧ್ಯೆಯ ನಗರಗಳಲ್ಲಿ ಗುಂಡಿನ ಶಬ್ದ ಕೇಳಿಸುವುದಿಲ್ಲ. ನಗರದಲ್ಲಿ ಕರ್ಫ್ಯೂಗಳನ್ನು ವಿಧಿಸುವುದಿಲ್ಲ. ಈ ಪವಿತ್ರವಾದ ಕ್ಷೇತ್ರದಲ್ಲಿ ಇನ್ನು ಕೇವಲ ದೀಪೋತ್ಸವ ಮತ್ತು ರಾಮೋತ್ಸವಗಳು ಜರುಗಲಿವೆ’ ಎಂದರು.
“ಅಯೋಧ್ಯೆಯ ಪ್ರತಿ ಬೀದಿಗಳಲ್ಲಿ ಇನ್ನೂ ಶ್ರೀರಾಮ ಸಂಕೀರ್ತನೆ ಕೇಳಲಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿರಾಜಮಾನವಾಗುವ ಮೂಲಕ ರಾಮ ರಾಜ್ಯ ಉದಯವಾಗಿದೆ’ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
“ಇಂದು ರಾಮಲಲ್ಲಾ ಪ್ರತಿಷ್ಠಾಪನೆಯ ಕ್ಷಣಗಳನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಭಾವುಕರಾಗಿ ದ್ದಾರೆೆ’ ಎಂದು ಬಣ್ಣಿಸಿದರು.
“ಈ ಐತಿಹಾಸಿಕ ಕ್ಷಣದಲ್ಲಿ ಇಡೀ ಜಗತ್ತು, ವಿಶೇಷವಾಗಿ ಅಯೋಧ್ಯೆ ಹರ್ಷಗೊಂಡಿದೆ. ಮಂದಿರ ನಿರ್ಮಾಣವನ್ನು ಕಣ್ಣಾರೆ ಕಂಡ ಈ ಪೀಳಿಗೆ ನಿಜಕ್ಕೂ ಧನ್ಯರು’ ಎಂದರು. “ಇದು ಕೇವಲ ರಾಮ ಮಂದಿರವಲ್ಲ. ಇದು ರಾಷ್ಟ್ರ ಮಂದಿರ’ ಎಂದು ಉ.ಪ್ರ. ಸಿಎಂ ಪ್ರತಿಪಾದಿಸಿದರು.