Advertisement

Ayodhya ಶ್ರೀರಾಮನ ಮೂರ್ತಿ ಆಯ್ಕೆ ಜ. 17ಕ್ಕೆ ನಿರ್ಧಾರ

12:42 AM Jan 04, 2024 | Team Udayavani |

ಉಡುಪಿ: ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಬಾಲರಾಮನ ವಿಗ್ರಹ ಯಾವುದೆಂದು ಜ. 17ರಂದು ಘೋಷಣೆ ಆಗಲಿದೆ. ಎರಡು ಕರಿ, ಒಂದು ಅಮೃತಶಿಲೆ ಮೂರ್ತಿ ನಿರ್ಮಾಣವಾಗಿದೆ.

Advertisement

ಪೂರ್ಣವಾಗಿ ಪರಿಶೀಲಿಸಿ ಅಂತಿಮವಾಗಿ ನಿರ್ಧರಿ ಸಲಿದ್ದು, ಮೆರವಣಿಗೆ, ಸರಯೂ ನದಿಯ ಅಭಿಷೇಕದ ದಿನ ಆಯ್ಕೆ ಮಾಡಲಾಗುತ್ತದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಮಾಧ್ಯಮ ದವರೊಂ ದಿಗೆ ಮಾತನಾಡಿದ ಅವರು, ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನಿ ಸುವುದಕ್ಕೆ ಸಂಬಂಧಿಸ ಯಾವುದೇ ಗೊಂದಲವಿಲ್ಲ. ದೇಶದಲ್ಲಿ ರಾಮನ ಭಕ್ತರು, ಸಂತರು ಮಹಂತರು ಬಹಳ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು ಭಕ್ತರೆಲ್ಲ ಆಮಂತ್ರಿತರೇ. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟು ಕೊಂಡು ಆಹ್ವಾನ ನೀಡಲಾಗಿದೆ. ಸೀಮಿತ ಸ್ಥಳಾವಕಾಶ ಇರುವುದರಿಂದ ಎಲ್ಲರಿಗೂ ಅವಕಾಶ ಕಲ್ಪಿಸುವುದು ಕಷ್ಟವಾದೀತು. ಪ್ರತಿಷ್ಠಾಪನೆಯ ಬಳಿಕ ಕೋಟ್ಯಂತರ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶವಿದೆ ಎಂದರು.

ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತ ರು ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದ ವರು ಮುಂದಿನ ದಿನದಲ್ಲಿ ಅಯೋಧ್ಯೆಗೆ ಹೋಗಬೇಕು. ಅಲ್ಲಿ ಈಗಾಗಲೇ ಟೆಂಟ್‌, ಶೆಡ್‌ ತಯಾರಾ ಗಿದೆ. ಧನುರ್ಮಾಸದ ಕಾರಣ ಹೊರಗೆ ಮಲಗಲು ಸಾಧ್ಯವಿಲ್ಲ ಎಂದರು.

ಅಯೋಧ್ಯೆಯಲ್ಲಿರುವುದು ಬಿಜೆಪಿ
ರಾಮ ಮಂದಿರ ಎಂಬ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ, ಎಲ್ಲರೊಳಗಿದ್ದಾನೆ. ಸಿದ್ದ ರಾಮಯ್ಯನವರೊಳಗೂ ಇದ್ದಾನೆ. ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ಈ ಮಂದಿರ ಎಲ್ಲ ಭಾರತೀಯರದ್ದು. ಬಿಜೆಪಿಯ ವರು ಮಾತ್ರ ದೇಣಿಗೆ ಕೊಟ್ಟದ್ದಾ? ಇದು ಪಕ್ಷದ ಮಂದಿರವಾಗಲು ಹೇಗೆ ಸಾಧ್ಯ? ಪಕ್ಷ, ಸರಕಾರದ ದೇಣಿಗೆಯಿಂದ ಮಂದಿರ ಕಟ್ಟಿದ್ದಲ್ಲ. ಜಗತ್ತಿನ ಭಕ್ತರ ದೇಣಿಗೆಯಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದರು.

Advertisement

ಹುಬ್ಬಳ್ಳಿ ಕರಸೇವಕರ ಪ್ರಕರಣ ತೆರೆದಿರುವುದಕ್ಕೆ ಅಸಮಾಧಾನ ವ್ಯಕ್ತಪ ಡಿಸಿದ ಶ್ರೀಗಳು, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದಿನ ಕರಸೇವಕರನ್ನು ಬಂಧಿಸಲಾಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನ ಎಂದು ಭಾವಿಸು ತ್ತೇವೆ. ಇಂತಹ ಕಾಲದಲ್ಲಿ ಇದು ಏಕೆ? ಈ ಬಗ್ಗೆ ಗೊಂದಲವಾಗದಂತೆ ಸರಕಾರ ಮುಂಜಾಗ್ರತೆ ವಹಿಸಬೇಕು ಎಂದರು.

ಪ್ರಾಣಪ್ರತಿಷ್ಠೆ ಜಗತ್ತಿನ ಉತ್ಸವ. ದೇಶದಲ್ಲಿ ಹಿಂದೂಗಳು ಬಹುಸಂಖ್ಯೆ ಯಲ್ಲಿದ್ದಾರೆ. ಎಲ್ಲರ ಭಾವನೆ ಮನ್ನಿಸಿ, ಗೌರವಿಸಿ ಸಾರ್ವತ್ರಿಕ ರಜೆ ಸಾರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಶ್ರೀಕೃಷ್ಣ ಮಠದಲ್ಲಿ ಚೂರ್ಣೋತ್ಸವ ಮುಗಿಸಿ ಜ. 15ಕ್ಕೆ ಅಯೋಧ್ಯೆಗೆ ತೆರಳಬೇಕಿದೆ. ಪರ್ಯಾಯ ಹಾಗೂ ಅಯೋಧ್ಯೆ ಎರಡರಲ್ಲೂ ಭಾಗವಹಿ ಸುವುದು ಅಸಾಧ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next