Advertisement

ಅಯೋಧ್ಯೆ: ದಾಖಲೆಗಳ ಇಂಗ್ಲಿಷ್‌ ಭಾಷಾಂತರಕ್ಕೆ ಸುಪ್ರೀಂ ಆದೇಶ

04:24 PM Feb 08, 2018 | udayavani editorial |

ಹೊಸದಿಲ್ಲಿ : ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಕಕ್ಷಿದಾರರಾಗಿರುವವರು ತಾವು ಸಲ್ಲಿಸಿರುವ ದಾಖಲೆ ಪತ್ರಗಳ ಇಂಗ್ಲಿಷ್‌ ಭಾಷಾಂತರವನ್ನು ಎರಡು ವಾರಗಳ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 

Advertisement

ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ವಿಶೇಷ ಪೀಠವು ಮಾರ್ಚ್‌ 14ರಂದು ಅಪೀಲುಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು  ಅಂದಿನಿಂದ ದಿನವಹಿ ನೆಲೆಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಹೇಳಿತು. 

ಜಸ್ಟಿಸ್‌ ಅಶೋಕ್‌ಭೂಷಣ್‌ ಮತ್ತು ಎಸ್‌ ಎ ನಜೀರ್‌ ಅವರನ್ನು ಒಳಗೊಂಡ ವಿಶೇಷ ಪೀಠವು “ಈ ವಿವಾದದ ವಿಚಾರಣೆಯನ್ನು ನ್ಯಾಯಾಲಯವು ಸಂಪೂರ್ಣವಾಗಿ ಭೂ ವಿವಾದದ ನೆಲೆಯಲ್ಲಿ ಕೈಗೊಳ್ಳುವುದು; ಇತರ ಕೋನಗಳಿಂದ ಸಲ್ಲಿಸಲ್ಪಟ್ಟಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next