Advertisement

ಅಯೋಧ್ಯೆ: ರಾಮಲೀಲಾ ವೈಭವ ಶುರು

01:25 AM Oct 19, 2020 | mahesh |

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮ ಲೋಕ ಧರೆಗಿಳಿದಿದೆ. ಸರಯೂ ತೀರದಲ್ಲಿ ನವರಾತ್ರಿ ಪ್ರಯುಕ್ತ ಶನಿವಾರದಿಂದ ರಾಮಲೀಲಾ ಆರಂಭಗೊಂಡಿದ್ದು, ಅ.25ಕ್ಕೆ ಸಮಾಪ್ತಿಗೊಳ್ಳಲಿದೆ.

Advertisement

ಇಲ್ಲಿನ ಲಕ್ಷ್ಮಣ್‌ ಖೀಲಾದಲ್ಲಿ “ಅಯೋಧ್ಯೆ ಕಿ ರಾಮಲೀಲಾ’ ಭಕ್ತಿರೂಪಕ, 9 ದಿನಗಳಲ್ಲಿ ಸಂಪೂರ್ಣ ರಾಮಾಯಣವನ್ನು ಕಟ್ಟಿಕೊಡಲಿದೆ. ಬಾಲಿವುಡ್‌ನ‌ ನುರಿತ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. “ರಾಮ’ತಾರಾಗಣ: ನಾರದ ಮುನಿಯಾಗಿ ಬಾಲಿವುಡ್‌ನ‌ ಅಸ್ರಾನಿ, ಸಂಸದ- ಭೋಜು³ರಿ ನಟ ಮನೋಜ್‌ ತಿವಾರಿ ಅಂಗದನಾಗಿ, ಗೋರಖ್‌ಪುರ್‌ ಸಂಸದ- ಭೋಜುರಿ ತಾರೆ ರವಿ ಕಿಶನ್‌ ಭರತನಾಗಿ ನಟಿಸಿದ್ದಾರೆ. ರಮಾನಂದ ಸಾಗರ ನಿರ್ದೇಶಿತ “ರಾಮಾಯಣ’ದಲ್ಲಿ ಹನುಮಾನ್‌ ಆಗಿ ಜನಪ್ರಿಯರಾಗಿದ್ದ ನಟ, ಮಾಜಿ ಕುಸ್ತಿಪಟು ವಿಂದು ದಾರಾ ಸಿಂಗ್‌ ಪುತ್ರ ವಿಂದು ದಾರಾ ಸಿಂಗ್‌ ಹನುಮನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಡಿಡಿ ಲೈವ್‌: “ರಾಮಲೀಲಾ’ವನ್ನು ದೂರದರ್ಶನ ಇದೇ ಮೊದಲ ಬಾರಿಗೆ ದೇಶದ 14 ಭಾಷೆಗಳಲ್ಲಿ ನೇರಪ್ರಸಾರ ಮಾಡಿದೆ. ಯೂಟ್ಯೂಬ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿಯೂ ಡಿಡಿ ತಂಡ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. 100 ಬಾಲ ಬ್ರಹ್ಮಚಾರಿಗಳ “ಶಾರದೀಯ ನವರಾತ್ರ’ ಆಚರಣೆಯಿಂದ ರಾಮಲೀಲಾಗೆ ಚಾಲನೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next