ಅಯೋಧ್ಯೆಯಲ್ಲಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಪೈಕಿ ಕೆಲವು ಪೂರ್ಣಗೊಳ್ಳುವ ಹಂತದೆ. ಅಯೋಧ್ಯೆ-ಅಕ್ಬ ರ್‌ಪುರ-ಬಾಸ್ಕರಿ ಹೆದ್ದಾರಿ ಚತುಷ್ಪಥಗೊಳಿಸಲಾಗಿದ್ದರೆ, ರಾ.ಹೆ.-27ರಿಂದ ಪಂಚಕೋಸಿ ಪರಿಕ್ರಮ ಮಾರ್ಗದಲ್ಲಿ ರಾಮ್‌ಪಥ್‌ಗೆ ರೈಲ್ವೇ ಮೇಲ್ಸೇತುವೆ, ಬಡಿ ಬುವಾ ರೈಲ್ವೇ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ, ದರ್ಶನ್‌ನಗರದ ಸನಿಹ ರೈಲ್ವೇ ಮೇಲ್ಸೇತುವೆ, ಅಮಾನಿಗಂಜ್‌ನಲ್ಲಿ ಬಹುಮಹಡಿ ಪಾರ್ಕಿಂಗ್, ಜಿಲ್ಲಾಧಿಕಾರಿ ಕಚೇರಿ ಸಮೀಪ ಸ್ಮಾರ್ಟ್ ವಾಹನ ಪಾರ್ಕಿಂಗ್, ಪಂಚಕೋಸಿ-ಚೌದಹ್ ಕೋಸಿ ಮಾರ್ಗದಲ್ಲಿ ತಡೆಗೋಡೆ, ಪರಿಕ್ರಮ ರಸ್ತೆಯುದ್ದಕ್ಕೂ ಇರುವ 25 ಪ್ರವಾಸಿ ತಾಣಗಳು ಮತ್ತು ಕೊಳಗಳ ಪುನರಾಭಿವೃದ್ಧಿ, ಅಲಂಕಾರಿಕ ಕಂಬಗಳು ಮತ್ತು ಪಾರಂಪರಿಕ ದೀಪಗಳ ಅಳವಡಿಕೆ, ಕೌಸಲ್ಯಾ ಸದನನಿರ್ಮಾಣ ಮುಕ್ತಿ ವೈಕುಂಠ ಧಾಮದ ಅಭಿವೃದ್ಧಿ ಕಾಮಗಾರಿ ಪ್ರಾಣಪ್ರತಿಷ್ಠೆ ವೇಳೆಗೆ ಪೂರ್ಣಗೊಳ್ಳಲಿವೆ.
ಮುಂದಿ ತಿಂಗಳು ಅಯೋಧ್ಯೆಯ 7 ವಾರ್ಡ್‌ಗಳಿಗೆ 24 ಗಂಟೆ ಸತತ ನೀರು ಪೂರೈಕೆ, ಸೂರ್ಯಕುಂಡದ ಸನಿಹದಲ್ಲಿ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ “ಧರ್ಮಪಥ’ ಕಾಮಗಾರಿ ಪೂರ್ಣಗೊಳ್ಳಲಿದೆ. ಮಾರ್ಚ್ ನಲ್ಲಿ ಅಯೋಧ್ಯೆ ಸಂಪೂರ್ಣ ಸೌರ ನಗರವಾಗಿ ಮಾರ್ಪಡಲಿದೆ. ಅಯೋಧ್ಯೆ-ಅಕ್ಬರ್‌ಪುರನ ರಸ್ತೆಯ ಫತೇಹ್‌ಗಂಜ್‌ನಲ್ಲಿ ರೈಲ್ವೇ ಮೇಲ್ಸೇತುವೆ, ಅಯೋಧ್ಯಾ-ಬಿಲ್ಹಾರ್ ಘಾಟ್ ನಡುವಣ ಚತುಷ್ಪಥ ರಸ್ತೆ, ಗುಪ್ತಾರ್ ಘಾಟ್‌ಸುಂದರೀಕರಣ, ನಯಾ ಘಾಟ್‌ನಿಂದ ಲಕ್ಷ್ಮಣ್ ಘಾಟ್‌ವರೆಗೆ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಎಪ್ರಿಲ್‌ನಲ್ಲಿ ಅವಧ್ ಬಸ್ ನಿಲ್ದಾಣದ ಸನಿಹ ಆಶ್ರಯತಾಣ, ನಾಕಾ ಬೈಪಾಸ್ ಸಮೀಪ ಕಲ್ಯಾಣ್ ಭವನ್ ನಿರ್ಮಾಣ ಮತ್ತು ಅಯೋಧ್ಯೆ ನಗರವನ್ನು ಪ್ರವೇಶಿ ಸುವ ಸ್ಥಳಗಳಲ್ಲಿ ನಾಲ್ಕು ಐತಿಹಾಸಿಕ ಪ್ರವೇಶ ದ್ವಾರಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.