Advertisement
ಜನವರಿ 22ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ಸುಮುಹೂರ್ತದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದನ್ನು ಪ್ರತೀ ರಾಮಭಕ್ತರು ತಮ್ಮತಮ್ಮ ಊರು, ಮನೆಗಳಲ್ಲಿ ಸಂಭ್ರಮದಿಂದ ಆಚರಿ ಸುವಂತಾಗಲು ಈ ಅಭಿಯಾನ ನಡೆಯಲಿದೆ. ಅಯೋಧ್ಯೆಯಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನೇರಪ್ರಸಾರ ಮೂಲಕ ತೋರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಜ. 1ರಿಂದ 15ರ ವರೆಗೆ ವಿಹಿಂಪ ಕಾರ್ಯಕರ್ತರು 8 ಲಕ್ಷ ಮನೆಗಳಿಗೆ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ, ಆಮಂತ್ರಣ ಪತ್ರವನ್ನು ವಿತರಿಸಲಿದ್ದಾರೆ ಎಂದರು.
ಶ್ರೀರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ದಿನ ಸೂರ್ಯಾಸ್ತದ ಬಳಿಕ ಎಲ್ಲ ಮನೆಗಳಲ್ಲಿ ಕನಿಷ್ಠ ಐದು ದೀಪ ಬೆಳಗಬೇಕು, ಮನೆಯವರೆಲ್ಲರೂ ಸೇರಿ ಅಯೋಧ್ಯೆ ಮಂದಿರ ಇರುವ ಉತ್ತರ ದಿಕ್ಕಿಗೆ ಮುಖ ಮಾಡಿ ಮಹಾ ಮಂಗಳಾರತಿ ಬೆಳಗಬೇಕು. ಆ ದಿನ ಸಮಸ್ತ ಹಿಂದೂಗಳಿಗೆ ದೀಪಾವಳಿಯಾಗಲಿದೆ. ಜ. 7ರಂದು ವಿಶೇಷ ಮಹಾಸಂಪರ್ಕ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.
Related Articles
ಸ್ಥಳಾವಕಾಶ, ಭದ್ರತೆ ಇತ್ಯಾದಿ ಕಾರಣಗಳಿಂದಾಗಿ ಪ್ರತಿಷ್ಠೆಯ ದಿನ ಸೀಮಿತ ಮಂದಿಗೆ ಮಾತ್ರವೇ ಅಯೋಧ್ಯೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ರಾಜ್ಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಉಡುಪಿಯ ಅಷ್ಟಮಠಾಧಿಪತಿಗಳು, ಪ್ರೊ| ಪುರಾಣಿಕ್ ಸಹಿತವಾಗಿ ತೆರಳಲಿ ದ್ದಾರೆ. ಮುಂದೆ ಆಸಕ್ತರೆಲ್ಲರಿಗೂ ತೆರಳುವುದಕ್ಕೆ ಅವಕಾಶ ಸಿಗಲಿದೆ.
Advertisement
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಶ್ರೀರಾಮ ಮಂದಿರ ಅಭಿಯಾನ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.