Advertisement

Ayodhya: ರಜತ ಕಲಶ ಸೇವೆ- ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನ

12:53 AM Feb 02, 2024 | Team Udayavani |

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಅನಂತರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಿತ್ಯವೂ ಮಂಡಲೋತ್ಸವ ನಡೆಯುತ್ತಿದೆ. ಕಲಶಾಭಿಷೇಕ, ಹೋಮ, ಹವನ, ನಿತ್ಯಪೂಜೆ, ಉತ್ಸವ ಇತ್ಯಾದಿ ಪ್ರಮುಖವಾಗಿವೆ.

Advertisement

ಈವರೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಅಲ್ಲಿನ ಪ್ರಮುಖರಿಂದ ರಜತಕಲಶಾಭಿಷೇಕ ನಡೆದಿದ್ದು. ಇದೀಗ ಭಕ್ತರಿಂದ ರಜತಕಲಶಾಭಿಷೇಕ ಆರಂಭಗೊಂಡಿದೆ. ಮಾರ್ಚ್‌ 10ರ ವರೆಗೆ ಈ ಸೇವೆಗೆ ಅವಕಾಶ ಇರುತ್ತದೆ. ಒಂದು ಕಲಶದ ಸೇವಾದಾರರ ಪರವಾಗಿ ಎರಡರಿಂದ ಮೂರು ಮಂದಿ ಭಾಗವಹಿಸ ಬಹುದಾಗಿದೆ. 48 ದಿನಗಳ ಕಾಲ ನಡೆಯುವ ಈ ಮಂಡಲೋತ್ಸವದಲ್ಲಿ 1,100 ಬೆಳ್ಳಿ ಕಲಶಗಳ ಮೂಲಕ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.

2023ನೇ ಸಾಲಿನಲ್ಲಿ ಬಡವರ ಕಲ್ಯಾಣಕ್ಕಾಗಿ ಮನೆ ನಿರ್ಮಾಣ, ಶಿಕ್ಷಣ, ಆರೋಗ್ಯ ಅಥವಾ ನೋಂದಾಯಿತ ಗೋಶಾಲೆಗಳು, ಅನಾಥಾಶ್ರಮ, ವೃದ್ಧಾಶ್ರಮ ಮೊದಲಾದ ಯಾವುದಾದರೂ ಸಮಾಜ ಸೇವಾ ಸಂಸ್ಥೆಗಳಿಗೆ ಕನಿಷ್ಠ 5 ಲಕ್ಷ ರೂ. ದೇಣಿಗೆ ಅಥವಾ ಆರ್ಥಿಕ ಸಹಾಯ ನೀಡಿರಬೇಕು. ವೈಯಕ್ತಿಕ ಅಥವಾ ಸಂಸ್ಥೆಯ ನೆಲೆಯಲ್ಲಿ ಮಾಡಿರುವ ಸಮಾಜ ಸೇವೆಯನ್ನು ಪರಿಗಣಿಸಲಾಗುವುದು. ರಾಮರಾಜ್ಯದ ಪರಿಕಲ್ಪನೆಯಡಿ ಸಮಾಜ ಸೇವೆ ಹೆಚ್ಚಬೇಕು ಎಂಬ ನೆಲೆಯಲ್ಲಿ ಇದು ನಡೆಯುತ್ತಿದೆ. ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಬಹುದು. ಸೇವಾಕರ್ತರೇ ರಜತಕಲಶವನ್ನು ಒಂದು ದಿನ ಮುಂಚಿತವಾಗಿಯೇ ಮುಟ್ಟಿಸಬೇಕು. ಪೂಜೆಯ ಅನಂತರದಲ್ಲಿ ರಜತಕಲಶ ಸಹಿತ ಪ್ರಸಾದವನ್ನು ಸೇವಾಕರ್ತರಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next