ಮೂಲ್ಕಿ: ವಿಶೇಷ ದೀಪಾಲಂಕಾರಕ್ಕೆ ಹೆಸರಾಗಿ ರುವ ಮೂಡುಬಿದಿರೆಯ ಲೆಕ್ಸಾ ಲೈಟಿಂಗ್ ಟೆಕ್ನಾಲಜಿಸ್ ಪ್ರೈವೇಟ್
ಲಿಮಿಟೆಡ್ ಸಂಸ್ಥೆಯು ಅಯೋದ್ಯೆಯ ರೈಲು ನಿಲ್ದಾಣವನ್ನು 300 ಕ್ಕೂ ಅಧಿಕ Rಎಆಗ ಕಲರ್ ಲೈಟ್‌ಗಳನ್ನು ಅಳವಡಿಸುವ ಮೂಲಕ ವೈವಿಧ್ಯಮಯ ಬಣ್ಣಗಳನ್ನು ದಿನಕ್ಕೊಂದರಂತೆ ಪ್ರದರ್ಶಿಸಿ ಪ್ರವಾಸಿಗರ ಕಣ್ಮನ ಸೆಳೆಯಲು ಸಿದ್ಧವಾಗಿದೆ.
ಜಪಾನೀಸ್ ಉತ್ಪಾದನ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಾರಂಭವಾದ ಈ ಉದ್ಯಮ ಪ್ರಸ್ತುತ 250ಕ್ಕೂ ಅಧಿಕ ಉತ್ಸಾಹಿ ಸ್ಥಳೀಯ ಪ್ರತಿಭೆಗಳನ್ನು ಒಳಗೊಂಡಿದ್ದು, “ಮೇಕ್ ಇನ್ ಇಂಡಿಯಾ’ ತಣ್ತೀದೊಂದಿಗೆ ಕಾರ್ಯಾಚರಿಸುತ್ತಿದೆ.
ಸಂಶೋಧನೆ ಮತ್ತು ಅಭಿವೃದ್ಧಿ, ಪರಿಕಲ್ಪನೆ, ಕಚ್ಚಾ ವಸ್ತುಗಳನ್ನು ಪಡೆಯುವುದು, ಯೋಜನೆ, ವಿನ್ಯಾಸ, ಉತ್ಪಾದನೆ ಮತ್ತು ವಿತರಣೆ ಎಂಬ ಪರಿಕಲ್ಪನೆಯ ಆಧಾರದಲ್ಲಿ 500ಕ್ಕೂ ಅಧಿಕ ವಿಶೇಷ ಬೆಳಕಿನ ಉತ್ಪನ್ನಗಳನ್ನು ಉತ್ಪಾದಿಸಿ ಭಾರತದ ಪ್ರಮುಖ ಬ್ರ್ಯಾಂಡ್ ಆಗಿ ಹೊರಹೊಮ್ಮುತ್ತಿದೆ.
ಲೆಕ್ಸಾ ಸಂಸ್ಥೆಯ ಗರಿಮೆಗಾಗಿ ಮಾಲಕ ರೊನಾಲ್ಡ್ ಸಿಲ್ವನ್ ಡಿ’ಸೋಜಾ ಅವರಿಗೆ ಆತ್ಮನಿರ್ಭರ ಭಾರತ ಅವಾರ್ಡ್, ಹೈ ಪ್ಲೆ„ಯರ್ಸ್ ಗ್ಲೋಬಲ್ ಇಂಡಿಯನ್ಸ್ ಅವಾರ್ಡ್, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಲಭಿಸಿವೆ.
ಕೆಲವು ದಿನಗಳ ಹಿಂದೆ ಲೆಕ್ಸಾ ಸಂಸ್ಥೆಯು ಕರ್ನಾಟಕದ ಸುವರ್ಣ ವಿಧಾನ ಸೌಧವನ್ನು ಲೈಟಿಂಗ್ ಮೂಲಕ ಅಲಂಕರಿಸಿ ಗಮನಸೆಳೆದಿತ್ತು.