Advertisement
ಅಯೋಧ್ಯೆಯ ಪಾಂಜಿ ತೋಲಾ ಎಂಬಲ್ಲಿ ಪ್ರಧಾನಿಯವರ ವಾಹನ ತೆರಳಿದಾಗ ಗುಲಾಬಿ ಹೂಗಳನ್ನು ಕಾರಿನ ಮೇಲೆ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಅತಿಥಿ. ಅವರು ನಮ್ಮ ಸ್ಥಳಕ್ಕೆ ಬಂದಿದ್ದಾರೆ. ಸ್ವಾಗತಿಸುವುದು ನಮ್ಮ ಕರ್ತವ್ಯ’ ಎಂದಿದ್ದಾರೆ. ಅಯೋಧ್ಯೆಗೆ ಪ್ರಧಾನಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಗತಿಸಲು ಸಿಕ್ಕ ಅವಕಾಶಕ್ಕೆ ಸಂಭ್ರಮ ಪಟ್ಟಿದ್ದಾರೆ. ಜ. 22ರಂದು ಅವರೇ ಮಂದಿರವನ್ನು ಲೋಕಾರ್ಪಣೆ ಮಾಡುವುದು ಸರಿಯಾದದ್ದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೊಸದಿಲ್ಲಿಯಿಂದ ಅಯೋಧ್ಯೆಗೆ ಮೊದಲ ವಿಮಾನ ದಲ್ಲಿ ಪೈಲಟ್ ಕ್ಯಾ| ಅಶುತೋಷ್ ಶೇಖರ್ ಪ್ರಯಾಣಿ ಕರನ್ನು ಸ್ವಾಗತಿಸಿ, “ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ತೆರಳುತ್ತಿರುವುದು ಹೆಮ್ಮೆಯ ವಿಚಾರ. ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಿದ್ದೇನೆ. ಜೈ ಶ್ರೀರಾಮ್’ ಎಂದಿದ್ದಾರೆ. ಅದಕ್ಕೆ ಪೂರಕವಾಗಿ ಖುಷಿ ಪಟ್ಟ ಪ್ರಯಾಣಿಕರೂ ಕೂಡ “ಜೈಶ್ರೀರಾಮ್’ ಎಂದು ಘೋಷಣೆ ಹಾಕಿದ್ದಾರೆ. ಇದರ ಜತೆಗೆ ಕೇಕ್ ಕತ್ತರಿಸಿ ಸಂಭ್ರಮ ವ್ಯಕ್ತಪಡಿಸಲಾಗಿದೆ. ಕೆಲವು ಪ್ರಯಾಣಿಕರು ಹನುಮಾನ್ ಚಾಲಿಸ ಪಠಿಸಿದ್ದಾರೆ.