Advertisement
ರಾಜಸ್ಥಾನದ ಅಲ್ವಾರ್‌ನಲ್ಲಿ ರವಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್‌ನವರು ಅಯೋಧ್ಯೆ ವಿಚಾರಣೆ ವಿಳಂಬಕ್ಕಾಗಿ ಜಡ್ಜ್ಗಳಿಗೇ ಬೆದರಿಕೆ ಹಾಕುತ್ತಿದ್ದಾರೆ. ಆ ಮೂಲಕ ನ್ಯಾಯಾಂಗವನ್ನೂ ರಾಜಕೀಯಕ್ಕೆ ಎಳೆದುತಂದಿದೆ. ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳೇನಾದರೂ ಕಾಂಗ್ರೆಸ್ ಹೇಳಿದಂತೆ ಕೇಳದೇ ಇದ್ದರೆ, ಅವರ ವಿರುದ್ಧ ವಾಗ್ಧಂಡನೆ ವಿಧಿಸುವ ಬೆದರಿಕೆ ಹಾಕಲಾಗುತ್ತದೆ. ಇದೊಂದು ಅಪಾಯಕಾರಿ ಬೆಳವಣಿಗೆ’ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ನ್ಯಾಯಾಂಗದ ಮೇಲೆ ನಂಬಿಕೆಯಿಲ್ಲ.
Related Articles
ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಬೇಕೆಂದು ಆಗ್ರಹಿಸಿ ಆರ್‌ಎಸ್‌ಎಸ್, ವಿಎಚ್‌ಪಿ ಆಯೋಜಿಸಿರುವ ಧರ್ಮ ಸಭಾ ಸಮ್ಮೇಳನ ಹಾಗೂ ಶಿವಸೇನೆಯ ಉದ್ಧವ್ ಠಾಕ್ರೆ ಆಯೋಜಿಸಿರುವ ಪ್ರತ್ಯೇಕ ಕಾರ್ಯಕ್ರಮ, ಐತಿಹಾಸಿಕ ನಗರವಾದ ಅಯೋಧ್ಯೆಯಲ್ಲಿ ಜನಜಾತ್ರೆಗೆ ಕಾರಣವಾಯಿತು.
Advertisement
ಈ ಮಹಾ ಸಮ್ಮೇಳನಗಳು, ಬಾಬ್ರಿ ಮಸೀದಿಯನ್ನು ಕೆಡವಿ 26 ಸಂವತ್ಸರಗಳು ಪೂರೈಸುವುದಕ್ಕೆ (ಡಿ. 6) ಎರಡು ವಾರಗಳ ಮುನ್ನವೇ ನಡೆಯುತ್ತಿದೆ. ಎರಡು ಮಹಾ ಸಮ್ಮೇಳನಗಳ ಹಿನ್ನೆಲೆಯಲ್ಲಿ, ದೇಗುಲಗಳ ಮಂದಿರವಾದ ಈ ಊರಿನಲ್ಲಿರುವ ಪ್ರತಿಯೊಂದು ಧಾರ್ಮಿಕ ಕೇಂದ್ರಗಳೆಲ್ಲವೂ ಪಂಚಾಯ್ತಿ ಕಟ್ಟೆಯಂತಾಗಿ, ಅಲ್ಲಿ ಕೇವಲ ಅಧ್ಯಾದೇಶ ವಿಚಾರವೇ ಚರ್ಚೆಯಾಗುತ್ತಿತ್ತು.
ಕಾಷಾಯ ವಸ್ತ್ರ, ರಾಮ ಜಪ: ರಾಮನ ಜನ್ಮಸ್ಥಳಕ್ಕೆ ಲಕ್ಷೊàಪಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ದ ಜನರ ಬಾಯಲ್ಲಿ “ಜೈ ಶ್ರೀ ರಾಮ್’ ಜಪ ಮುಗಿಲು ಮುಟ್ಟಿತ್ತು. ಕಾಷಾಯ ವಸ್ತ್ರಗಳನ್ನು ಧರಿಸಿ, ಅಕ್ಕಪಕ್ಕದ ಊರುಗಳಿಂದ ಮಾತ್ರವಲ್ಲದೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಈ ಜನರು ರಾಮಮಂದಿರ ಸದ್ಯದಲ್ಲೇ ಕಟ್ಟೇ ಕಟ್ಟುತ್ತೇವೆ ಎಂಬ ಭರವಸೆಯೊಂದಿಗೆ ಸಮ್ಮೇಳನಗಳು ನಡೆಯುತ್ತಿದ್ದ ಕಡೆಗೆ ಹೆಜ್ಜೆ ಹಾಕುತ್ತಿದ್ದರು.
ಧರ್ಮ ಸಭಾ ಆಯೋಜಿಸಲಾಗಿದ್ದ, “ಬಡೇ ಭಕ್ತಮಾಲ್ ಕಿ ಬಗಿಯಾ’ ವಿವಾದಿತ ರಾಮ ಮಂದಿರ ಸ್ಥಳಕ್ಕೆ ಸನಿಹದಲ್ಲೇ ಇರುವುದರಿಂದ ಇಲ್ಲಿ ಬಂದವರು ರಾಮ ಲಲ್ಲಾನಿಗೆ ನಮಸ್ಕರಿಸಿ ತೆರಳುತ್ತಿದ್ದರು.
ಮೈದಾನಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಎತ್ತೆಡೆ ಕಣ್ಣು ಹಾಯಿಸಿದರೂ ಕೇಸರಿ ವಸ್ತ್ರಧಾರಿಗಳೇ, ರಾಮನಾಮ ಜಪವೇ. ಇವರು ಸಾಗಿ ಬರುವ ಹಾದಿಗಳಿಗೆ ಹೂವಿನ ದಳಗಳನ್ನು ಚೆಲ್ಲಲಾಗಿತ್ತು. ಆ ಜಾಗಕ್ಕೆ ಸೇರುವ ಎಲ್ಲಾ ದಾರಿಗಳಲ್ಲೆಡೆ 1992ರಲ್ಲಿ ನಡೆದಿದ್ದ “ಕರ ಸೇವಾ’ದ ನಂತರ, ಅಯೋಧ್ಯೆಯಲ್ಲಿ ಅಪಾರ ಸಂಖ್ಯೆಯಲ್ಲಿ ರಾಮಭಕ್ತರು ಜಮಾಯಿಸಿದ್ದು ಇದೇ ಮೊದಲು ಎಂದು ಪರಿಗಣಿಸಲ್ಪಟ್ಟಿತು.
ಈಗೆಲ್ಲ ರಾಮ ಅನಂತರ ಆರಾಮ“ಚುನಾವಣೆಗೂ ಮೊದಲು ರಾಮ ನಾಮ. ಚುನಾವಣೆ ನಂತರ ಆರಾಮ’. ಇದು ಬಿಜೆಪಿ ವಿರುದ್ಧ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಯೋಗಿಸಿದ ಹೊಸ ಟೀಕಾಸ್ತ್ರ. ಅಯೋಧ್ಯೆಯಲ್ಲಿ ಶಿವಸೇನೆ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, “”ಹಿಂದೆ, ವಾಜ ಪೇಯಿ ಹಿಂದೂ ಗಳು ಹೊಡೆತ ತಿನ್ನುವುದಿಲ್ಲ ಎಂದಿದ್ದು ಸತ್ಯ. ಹಿಂದೂ ಗಳು ಈಗ ಶಕ್ತಿಶಾಲಿಯಾಗಿ ದ್ದಾರೆ. ಬಿಜೆಪಿ ರಾಮಮಂದಿರ ಕಟ್ಟದಿದ್ದರೆ ಮುಂದಿನ ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗು ವುದಿಲ್ಲ. ಸದ್ಯಕ್ಕೆ ಶುರುವಾಗುವ ಚಳಿಗಾಲದ ಸಂಸತ್ ಅಧಿವೇಶನ ದಲ್ಲೇ ಅಧ್ಯಾದೇಶ ಜಾರಿ ಯಾಗಲಿ” ಎಂದು ಆಗ್ರಹಿಸಿದರು. ಏಕತಾ ಪ್ರತಿಮೆಗಿಂತ ರಾಮನ ಪ್ರತಿಮೆ ದೊಡ್ಡದು!
ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲರ ಪ್ರತಿಮೆಗಿಂತ (597 ಅಡಿ) ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮನ ಪ್ರತಿಮೆ ದೊಡ್ಡದಾಗಿರಲಿದ್ದು, ಇದು ಒಟ್ಟು 725 ಅಡಿ ಇರಲಿದೆ. ಶನಿವಾರ ರಾತ್ರಿ ಸರಕಾರ ಹೊರಡಿಸಿರುವ ಪ್ರಕಟನೆಯಲ್ಲಿ ಈ ಬೃಹತ್ ಕಂಚಿನ ಪ್ರತಿಮೆಯ ರೂಪು ರೇಷೆಗಳನ್ನು ವಿವರಿಸಲಾಗಿದೆ. ಪ್ರತಿಮೆಯ ಒಟ್ಟು ಎತ್ತರ 495 ಅಡಿ ಇರಲಿದ್ದು, ಪ್ರತಿಮೆಯ ಮೇಲಿನ ಛತ್ರಿಯಾಕಾರ 65 ಅಡಿ, ಪ್ರತಿಮೆ ಕೆಳಗಿನ ಸ್ತೂಪ 164 ಅಡಿ ಇರಲಿದೆ. ಈ ಸ್ತೂಪದೊಳಗೆ ಅಯೋಧ್ಯೆಯ ಇತಿ ಹಾಸ ಸಾರುವ ಆಧುನಿಕ ವಸ್ತು ಸಂಗ್ರಹಾಲಯವೊಂದನ್ನು ನಿರ್ಮಿ ಸಲಾಗುತ್ತದೆ. ಜತೆಗೆ, ಶ್ರೀರಾಮನ ವಂಶವಾದ “ಸೂರ್ಯ ವಂಶ’ದ ಮೊದಲ ದೊರೆಯಾದ ಮನುವಿನಿಂದ ಹಿಡಿದು ಶ್ರೀರಾಮನವರೆಗೆ ಆಗಿ ಹೋದ ಎಲ್ಲಾ ಸಾಮ್ರಾಟರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನೂ ಮಾಡಲಾಗುತ್ತದೆ. ಇದರ ಜತೆಗೆ ಶ್ರೀರಾಮನ ಅವತಾರದ ಮೂಲವಾದ ಶ್ರೀಮನ್ನಾರಾಯಣನ ದಶಾವತಾರಗಳ ಮಹತ್ವಗಳನ್ನು ಆಧುನಿಕ ತಂತ್ರಜ್ಞಾನಗಳಲ್ಲಿ ನಿರೂಪಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಮಹಾ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಭೂ ಸ್ವಾಧೀನ, ಮಣ್ಣಿನ ಗುಣಮಟ್ಟದ ಪರಿಶೀಲನೆ, ಗಾಳಿಯ ವೇಗ ಮುಂತಾದ ವಿವರಗಳನ್ನು ಕಲೆ ಹಾಕುವ ಕೆಲಸಗಳು ಸಾಗಿವೆ ಎಂದು ಸರಕಾರ ಹೇಳಿದೆ.