Advertisement

Ayodhya: ಮಂದಿರ ಮಾದರಿ ಅಯೋಧ್ಯೆ ಮಸೀದಿಗೂ ದೇಣಿಗೆ ಸಂಗ್ರಹ

12:29 AM Jan 17, 2024 | Team Udayavani |

ಲಕ್ನೋ: ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ನಿರ್ಮಿಸಲು ಇಂಡೊ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇ ಶನ್‌ (ಐಐಸಿಎಫ್) ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಅಯೋಧ್ಯೆ  ಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕ ರಿಂದ ದೇಣಿಗೆ ಸಂಗ್ರಹಿಸಿದ ರೀತಿ ಯಲ್ಲೇ ಮಸೀದಿ ನಿರ್ಮಿಸಲು ದೇಣಿಗೆ ಸಂಗ್ರಹ ಅಭಿ ಯಾನ ಆರಂಭಿಸಲು ಐಐಸಿಎಫ್ ನಿರ್ಧರಿಸಿದೆ. ಅದ ಕ್ಕಾಗಿ ಮುಂದಿನ ತಿಂಗಳು ಅಥವಾ ಮಾರ್ಚ್‌ ನಲ್ಲಿ ವೆಬ್‌ಸೈಟ್‌ ಆರಂಭಿಸಲಾಗುತ್ತದೆ. ಕ್ಯುಆರ್‌ ಕೋಡ್‌ ಮೂಲಕ ಹಣ ಸಂಗ್ರಹ ನಡೆಸುವುದಕ್ಕೂ ಫೌಂಡೇಷನ್‌ ತೀರ್ಮಾನಿಸಿದೆ.

Advertisement

ಮಸೀದಿ ನಿರ್ಮಾಣಕ್ಕೆ 5 ಎಕರೆ ಸ್ಥಳ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಅದರಂತೆ 2020ರ ಫೆಬ್ರವರಿಯಲ್ಲಿ ಅಯೋಧ್ಯೆಯ ಧನ್ನಿಪುರದಲ್ಲಿ ಐದು ಎಕರೆ ಸ್ಥಳವನ್ನು ಮಸೀದಿ ನಿರ್ಮಾಣಕ್ಕೆ ನೀಡಲಾಯಿತು.

“ಮಸೀದಿ, ಆಸ್ಪತ್ರೆ, ಸಮುದಾಯ ಅಡುಗೆ ಮನೆ, ಗ್ರಂಥಾಲಯ ಮತ್ತು ಸಂಶೋಧನ ಕೇಂದ್ರ ನಿರ್ಮಿಸಲಾಗುವುದು. ಅಜಾನ್‌ ಸಂದರ್ಭ ದಲ್ಲಿ ಬೆಳಕು ಮತ್ತು ನೀರಿನ ಪ್ರದರ್ಶನ ಏರ್ಪಡಿಸ ಲಾಗುವುದು. ಇದಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಲಾಗುವುದು. ಐಐಸಿಎಫ್ ವತಿಯಿಂದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವೆಬ್‌ಸೈಟ್‌ ಆರಂಭಿಸಲಾಗುವುದು’ ಎಂದು ಐಐಸಿಎಫ್ ಅಧ್ಯಕ್ಷ ಜಾಫ‌ರ್‌ ಅಹ್ಮದ್‌ ಫಾರೂಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next