Advertisement
ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ, ಪಾಂಡೇಶ್ವರ ಮಹಾಲಿಂಗೇಶ್ವರ, ಮರೋಳಿ ಸೂರ್ಯ ನಾರಾಯಣ, ಪುತ್ತೂರು ಮಹಾಲಿಂಗೇ ಶ್ವರ, ಕಟೀಲು ದುರ್ಗಾಪರಮೇಶ್ವರೀ, ಉಜಿರೆ ಜನಾರ್ದನ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವ ಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಕುಂದಾ ಪುರದ ಕುಂದೇಶ್ವರ ದೇವಸ್ಥಾನ, ಮಡಿಕೇರಿಯ ಓಂಕಾರೇಶ್ವರ ಮತ್ತು ಭಾಗಮಂಡಲ ದೇವಸ್ಥಾನ ಸೇರಿದಂತೆ ವಿವಿಧೆಡೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮುಜರಾಯಿ ಇಲಾಖೆಯು ಎಲ್ಲ ದೇವಸ್ಥಾನಗಳಲ್ಲಿ ವಿಶೇಷಪೂಜೆ ನಡೆಸುವಂತೆ ಆದೇಶ ನೀಡಿದ್ದು,ಇದರಲ್ಲಿ ಪ್ರತಿಯೊಬ್ಬ ಹಿಂದೂ ಭಾಗವಹಿಸಬೇಕು ಎಂದು ವಿನಂತಿಸಿದೆ.
ಆದ್ದರಿಂದ ಉದ್ಯಮಿಗಳು, ಸಂಘ-ಸಂಸ್ಥೆಗಳು, ವ್ಯಾಪಾರ ಮಳಿಗೆಗಳು, ಶಾಲಾ ಕಾಲೇಜು ಆಡಳಿತ ಮಂಡಳಿಗಳು, ಸರಕಾರಿ ಕಚೇರಿಗಳು ತಮ್ಮ ಉದ್ಯೋಗಿ, ಸಿಬಂದಿಗೆ, ವಿದ್ಯಾರ್ಥಿಗಳಿಗೆ ಭಾಗವಹಿಸಲು ಅನುಕೂಲ ಕಲ್ಪಿಸಬೇಕು ಎಂದು ವಿಹಿಂಪ ಮನವಿ ಮಾಡಿದೆ.
ಜ. 1ರಿಂದ 15ರ ತನಕ ನಡೆದ ಪವಿತ್ರ ಮಂತ್ರಾಕ್ಷತೆ ವಿತರಣೆ ಯಶಸ್ವಿಯಾಗಿ ನಡೆದಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಕರಾವಳಿಯಲ್ಲಿ 7 ಲಕ್ಷ ಮನೆಗಳಿಗೆ ಪವಿತ್ರ ಮಂತ್ರಾಕ್ಷತೆ ವಿತರಿಸಲಾಗಿದೆ. ಮನೆಯಲ್ಲಿ ಕನಿಷ್ಠ 5 ದೀಪ ಬೆಳಗಿಸಿ
ಪ್ರಾಣ ಪ್ರತಿಷ್ಠಾಪನೆಯ ದಿನ ಸಂಜೆ ಸೂರ್ಯಾಸ್ತವಾದ ಮೇಲೆ ಪ್ರತಿಯೊಬ್ಬ ರಾಮಭಕ್ತನೂ ತನ್ನ ಮನೆಯ ಮುಂದೆ ಎಲ್ಲ ದೇವಾದಿ ದೇವತೆಗಳನ್ನು ಪ್ರಸನ್ನಗೊಳಿಸಲು ಕನಿಷ್ಠ 5 ದೀಪಗಳನ್ನು ಬೆಳಗುವುದರೊಂದಿಗೆ ಮತ್ತೂಂದು ದೀಪಾವಳಿ ಆಚರಿಸಬೇಕು. ಮನೆಯವರೆಲ್ಲ ಸೇರಿ ಅಯೋಧ್ಯೆ ಶ್ರೀರಾಮ ಮಂದಿರವಿರುವ ಉತ್ತರ ದಿಕ್ಕಿಗೆ ಮುಖ ಮಾಡಿ ಮಹಾಮಂಗಳಾರತಿ ಮಾಡುವ ಮೂಲಕ ಶ್ರೀ ರಾಮಚಂದ್ರ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.