Advertisement

ಈ ಬಾರಿ ಅಯೋಧ್ಯೆಯಲ್ಲಿ ವಿಶೇಷ ಸಂಭ್ರಮ: ದೀಪೋತ್ಸವದಲ್ಲಿ ಪ್ರಧಾನಿ ಮೋದಿ

03:00 PM Oct 23, 2022 | Team Udayavani |

ಅಯೋಧ್ಯೆ : ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೀಪೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದು, ದೀಪಾವಳಿಯನ್ನು ಆಚರಿಸಲು ಸುಮಾರು 18 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಿದ್ದಾರೆ.

Advertisement

ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿರುವ ಪ್ರಧಾನಮಂತ್ರಿ ಬಳಿಕ ಮಂದಿರದ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದ ನಂತರ ಶ್ರೀರಾಮನ ಸಾಂಕೇತಿಕ ಪಟ್ಟಾಭಿಷೇಕವನ್ನು ನೆರವೇರಿಸಲಿದ್ದಾರೆ ಎಂದು ಶನಿವಾರ ಅವರ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಜೆ 6.30 ರ ಸುಮಾರಿಗೆ ಪ್ರಧಾನಿಯವರು ಸರಯೂ ನದಿಯ ದಡದಲ್ಲಿ ಆರತಿ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ, ನಂತರ ದೀಪೋತ್ಸವ ಆಚರಣೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಐದು ಅನಿಮೇಟೆಡ್ ಟ್ಯಾಬ್ಲಾಕ್ಸ್ ಮತ್ತು 11 ರಾಮಲೀಲಾ ಟೇಬಲ್ಲಾಕ್ಸ್ ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳನ್ನು ದೀಪೋತ್ಸವದಲ್ಲಿ ಪ್ರಸ್ತುತಪಡಿಸಲಾಗುತ್ತದೆ.ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 3-ಡಿ ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಶೋಗೆ ಸಾಕ್ಷಿಯಾಗಲಿದ್ದಾರೆ, ಜೊತೆಗೆ ಭವ್ಯವಾದ ಮ್ಯೂಸಿಕಲ್ ಲೇಸರ್ ಶೋ ಅನ್ನು ವೀಕ್ಷಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಭಾರತದ ಅಸ್ಮಿತೆ ಮತ್ತು ಸನಾತನ ನಂಬಿಕೆಯ ಪುರಾತನ ವೈಭವವನ್ನು ನಿರಂತರವಾಗಿ ಮರುಸ್ಥಾಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಸುಸ್ವಾಗತ ಎಂದು ಸ್ವಾಗತಿಸಿದ್ದಾರೆ.

Advertisement

ದೀಪೋತ್ಸವದ ದೀಪಗಳನ್ನು ಬೆಳಗಿಸುವ ಕಾರ್ಯದಲ್ಲಿ ತೊಡಗಿದ್ದ ಸ್ವಯಂಸೇವಕರು ಬೆಳಗ್ಗೆಯೇ ರಾಮ್ ಕಿ ಪೈಡಿ ಬಳಿ ಬರಲು ಪ್ರಾರಂಭಿಸಿದ್ದು ಮತ್ತು ಲತಾ ಮಂಗೇಶ್ಕರ್ ಚೌಕ್ ಬಳಿಯ ಟವರ್‌ನಿಂದ ಕೆಲವು ಪೊಲೀಸರು ಆ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪೊಲೀಸ್ ತಪಾಸಣೆಗೆ ಒಳಗಾಗಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.

ಒಂದು ಚೌಕದಲ್ಲಿ 256 ಮಣ್ಣಿನ ದೀಪಗಳನ್ನು ವ್ಯವಸ್ಥೆ ಮಾಡಲು ಸ್ವಯಂಸೇವಕರಿಗೆ ತಿಳಿಸಲಾಗಿದೆ ಮತ್ತು ಎರಡು ಚೌಕಗಳ ನಡುವಿನ ಅಂತರವು ಸರಿಸುಮಾರು ಎರಡರಿಂದ ಮೂರು ಅಡಿಗಳಿರುತ್ತದೆ ಎಂದು ದೀಪೋತ್ಸವದ ಆಯೋಜಕರು ತಿಳಿಸಿದ್ದಾರೆ. ಲೇಸರ್ ಶೋ, 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ, ಪಟಾಕಿ ಸಿಡಿಸುವ ಕಾರ್ಯಕ್ರಮವೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next