Advertisement

Ayodhya; ಬಾಲಕರಾಮನ ಗರ್ಭಗುಡಿ ಮುಂದೆ ಭಾವಪರವಶ ಭಕ್ತರ ಸಂಭ್ರಮ!

12:57 AM Jan 24, 2024 | Team Udayavani |

ಅಯೋಧ್ಯೆ: ಸೋಮವಾರವಷ್ಟೇ ಪ್ರತಿ ಷ್ಠಾಪನೆ ಗೊಂಡ ಬಾಲರಾಮನನ್ನು ನೋಡಲು ಜನರಿಗೆ ಕೊರೆಯುವ ಚಳಿ ಅಡ್ಡಿಯಾಗಲಿಲ್ಲ; ನೂಕು ನುಗ್ಗಲು ಅಡ್ಡವಾಗಲಿಲ್ಲ. ಮಂಗಳವಾರ ಬೆಳಗ್ಗಿನ ಜಾವ ನಾಲ್ಕು ಗಂಟೆಯಿಂದಲೇ ಸರತಿಯಲ್ಲಿ ನಿಂತು ಲಕ್ಷಾಂತರ ಮಂದಿ ಭಕ್ತರು ದರ್ಶನ ಪಡೆದರು.

Advertisement

ಪ್ರಾಣ ಪ್ರತಿಷ್ಠಾಪನೆ ಆದ ಮಾರನೇ ದಿನವಾದ ಮಂಗಳವಾರ ಬೆಳಗ್ಗೆ 7ಕ್ಕೆ ಸಾರ್ವಜನಿಕರ ದರ್ಶನಕ್ಕೆ ಮಂದಿರವನ್ನು ತೆರೆಯಲಾಯಿತು. ಆದರೆ ಬೆಳಗಿನ ಜಾವ 4ರಿಂದಲೇ ಲಕ್ಷಾಂತರ ಭಕ್ತರು ದರ್ಶನಕ್ಕೆ ಹಾತೊರೆದು ದೇಗುಲದ ಬಳಿ ಜಮಾಯಿಸಿದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ಭಕ್ತರನ್ನು ನಿಯಂತ್ರಿ ಸಲು ಪೊಲೀಸರು ಹರಸಾಹಸಪಟ್ಟರು.

ದೇವರ ಮುಂದೆ ಸೆಲ್ಫಿ
ಸೋಮವಾರ ದೇವಾಲಯದೊಳಗೆ ಮೊಬೈಲ್‌ ಫೋನ್‌ ತರಬೇಡಿ ಎಂದು ಗಣ್ಯಾತಿಗಣ್ಯರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಮಂಗಳವಾರ ಆ ನಿಯಮ ಮಂದಿರದ ಆವರಣದಲ್ಲಿ ಜಾರಿ ಗೊಳಿಸಲೇ ಇಲ್ಲ. ಬಹುತೇಕ ಜನರು ಫೋನ್‌ ಸಹಿತ ದೇವಾಲಯ ಪ್ರವೇಶಿಸಿದರು. ತಮ್ಮ ತಮ್ಮ ಫೋನ್‌ಗಳ ಮೂಲಕ ವೀಡಿಯೋ, ಫೋಟೋ ಕ್ಲಿಕ್ಕಿಸಿಕೊಂಡರು. ಸೆಲ್ಫಿ ಫೋಟೋಗ್ರಫಿ, ವೀಡಿಯೋ ಕಾಲ್‌ಗ‌ಳ ಮೂಲಕ ತಮ್ಮ ಮನೆಯವರಿಗೆ ಭವ್ಯ ರಾಮ ಮಂದಿರದ ನೇರ ಪ್ರಸಾರ ತಲುಪಿಸಿದರು.

ಅಯೋಧ್ಯೆಯ ಮಣ್ಣು
ರಾಮಲಲ್ಲಾನ ದರ್ಶನದ ಅನಂತರ ಭಕ್ತರು ಮುಖ್ಯ ರಸ್ತೆಗೆ ಬರುವಾಗ ಅಕ್ಕಪಕ್ಕದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಹೋಗುವ ದೃಶ್ಯಗಳು ಕಂಡುಬಂದವು.

- ಮುರಳೀಕೃಷ್ಣ ಮದ್ದಿಕೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next