Advertisement

ಅಯೋಧ್ಯೆ: ಅ.23 ರಂದು ದೀಪೋತ್ಸವ: ಗಿನ್ನೆಸ್ ದಾಖಲೆಗಾಗಿ ಬೆಳಗಲಿವೆ ಹಣತೆಗಳು

08:08 PM Aug 24, 2022 | Team Udayavani |

ಅಯೋಧ್ಯಾ: ಪ್ರಸಕ್ತ ಸಾಲಿನ ದೀಪಾವಳಿ ವೇಳೆ ಅ.23ರಂದು ಅಯೋಧ್ಯೆಯ ಸರಯೂ ನದಿ ತೀರದಲ್ಲಿ 14 ಲಕ್ಷ ಹಣತೆ ಬೆಳಗಿಸಿ ವಿಶ್ವದಾಖಲೆ ಸ್ಥಾಪಿಸಲು ಉ.ಪ್ರ. ಸರ್ಕಾರ ಮುಂದಾಗಿದೆ.

Advertisement

ಅದಕ್ಕಾಗಿ ಕುಂಬಾರರು ಜೈಸಿಂಗ್‌ಪುರ ಗ್ರಾಮದಲ್ಲಿ ಬಿರುಸಿನಿಂದ ಹಣತೆಗಳನ್ನು ತಯಾರಿಸಲಾರಂಭಿಸಿದ್ದಾರೆ.

ಈ ಪರಂಪರೆ ಶುರುವಾಗಿದ್ದು ಯೋಗಿ ಆದಿತ್ಯನಾಥ್‌ ಉತ್ತರಪ್ರದೇಶಕ್ಕೆ ಮುಖ್ಯಮಂತ್ರಿಯಾದ ನಂತರ.

2017ರಲ್ಲಿ 51,000 ಹಣತೆಗಳನ್ನು ಹಚ್ಚುವ ಮೂಲಕ ಅದನ್ನು ಆರಂಭಿಸಲಾಗಿತ್ತು. 2019ರಲ್ಲಿ ಈ ಸಂಖ್ಯೆ 4.10 ಲಕ್ಷ, 2020ರಲ್ಲಿ 6 ಲಕ್ಷ, 2021ರಲ್ಲಿ 9 ಲಕ್ಷಕ್ಕೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next