Advertisement
ಖಾಲ್ಸಾ ನೇತೃತ್ವದ 25 ಮಂದಿ ನಿಹಾಂಗ್ ಸಿಕ್ಖ್ರು ಮಸೀದಿಗೆ ನುಗ್ಗಿ, ಹವನ ನೆರವೇ ರಿಸಿದ್ದಲ್ಲದೇ ರಾಮನ ಹೆಸರನ್ನೂ ಗೋಡೆಗಳ ಮೇಲೆ ಬರೆದಿದ್ದರು. ಇದೀಗ ಅವರ ವಂಶಸ್ಥರಾದ ಬಾಬಾ ಹರ್ಜೀತ್ ಸಿಂಗ್ ರಸುಲ್ಪುರ್ ಬಾಲ ರಾಮನ ಪ್ರಾಣ ಪ್ರತಿಷ್ಠೆ ದಿನದಂದು ಅಯೋಧ್ಯೆಯಲ್ಲಿ ದಾಸೋಹ ಏರ್ಪಡಿಸುವುದಾಗಿ ಹೇಳಿದ್ದಾರೆ.
ರಾಮಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ (96) ಹಾಗೂ ಮುರಳಿ ಮನೋಹರ್ ಜೋಶಿ (90) ಅವರು ಜನವರಿಯಲ್ಲಿ ನಡೆಯಲಿರುವ ಮಂದಿರ ಉದ್ಘಾಟನೆಗೆ ಆಗಮಿಸುವುದಿಲ್ಲ. ಇಬ್ಬರು ನಾಯಕರೂ ಹಿರಿಯರಾಗಿರುವ ಕಾರಣ, ಅವರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಾರಂಭಕ್ಕೆ ಆಗಮಿಸದಂತೆ ಕೋರಲಾಗಿದ್ದು, ಅದಕ್ಕೆ ಅವರಿಬ್ಬರೂ ಒಪ್ಪಿ ಕೊಂಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯ ಕ್ರ ಮಕ್ಕೆ ಆಗಮಿಸು ವುದಿಲ್ಲ ಎಂದು ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.