Advertisement

ಬಿಡುಗಡೆ ತವಕದಲ್ಲಿ ಆಯೆ ಏರ್‌ ?

07:54 AM Mar 07, 2019 | |

ಆಕರ್ಷಕ ಟೈಟಲ್‌ ಮೂಲಕ ಸುದ್ದಿಯಾಗಿರುವ ಸಿನೆಮಾ ‘ಆಯೆ ಏರ್‌?’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಕುತೂಹಲ ಮೂಡಿಸಿದ್ದು, ಶೀಘ್ರದಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಅಂದಹಾಗೆ, ಸಿನೆಮಾದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಅದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕೆ. ಮಂಜುನಾಥ್‌ ಅವರದ್ದು ವಿಶೇಷವಾಗಿ ಗಮನ ಸೆಳೆಯುವಂತಹ ಕೆಲಸವನ್ನು ಈ ಸಿನೆಮಾದಲ್ಲಿ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಮಂಜುನಾಥ್‌ ಅವರದ್ದು. ಸಿನೆಮಾದ ನಿರ್ದೇಶನದ ಜವಾಬ್ದಾರಿಯೂ ಇವರದ್ದೇ ಆಗಿದೆ. ಶ್ರೀಕಾಂತ್‌ ರೈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

Advertisement

ಅರವಿಂದ ಬೋಳಾರ್‌ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಭರ್ಜರಿ ನಗುವಿಗೆ ಇಲ್ಲಿ ಯಥೇತ್ಛ ಅವಕಾಶವಿದೆ. ಕೋಸ್ಟಲ್‌ವುಡ್‌ನ‌ ಪ್ರಮುಖ ಕಲಾವಿದರು ನಟಿಸಿದ್ದಾರೆ. ಕೆಲವು ಹೊಸ ಪ್ರತಿಭಾನ್ವಿತ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಭರ್ಜರಿ ಮನೋರಂಜನೆ ಖಚಿತ ಎಂದು ಚಿತ್ರ ತಂಡ ಹೇಳುತ್ತಿದೆ. ಸಂಗೀತದಲ್ಲಿ ಶ್ರೀಧರ ದೀಕ್ಷಿತ್‌ (ಅರುಣ್‌), ಛಾಯಾಗ್ರಹಣದಲ್ಲಿ ಶ್ರೀನಿವಾಸನ್‌, ಸಂಕಲನದಲ್ಲಿ ಕಾರ್ತಿಕ್‌, ನೃತ್ಯದಲ್ಲಿ ವಿಕ್ರಮ್‌ ಅವರ ದುಡಿದಿದ್ದಾರೆ. ಟೋನಿ ಅವರು ಸಹ ನಿರ್ದೇಶಕರು. ಜತೆಗೆ ಇದೇ ಕೆಲಸದಲ್ಲಿ ತುಳಸಿದಾಸ್‌ ಮಂಜೇಶ್ವರ್‌ ಅವರು ಕೂಡ ದುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next