Advertisement
ಶೋಭಾ ಯಾತ್ರೆ: ಮಧ್ಯಾಹ್ನ 2.30ಕ್ಕೆ ಜ್ಯೋತಿ ಜಂಕ್ಷನ್‌ನಿಂದ ಬೃಹತ್ ಶೋಭಾ ಯಾತ್ರೆ ಹೊರಡಲಿದೆ. 4 ಗಂಟೆಗೆ ಕೇಂದ್ರ ಮೈದಾನದಲ್ಲಿ ಜನಾಗ್ರಹ ಸಭೆ ಜರಗುವುದು ಎಂದು ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಸಮಾವೇಶದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿ ಮತ್ತು 10 ಮಂದಿ ಎಸಿಪಿ ದರ್ಜೆಯ ಅಧಿಕಾರಿಗಳು, 40 ಜನ ಪೊಲೀಸ್ ಇನ್‌ಸ್ಪೆಕ್ಟರ್, 70 ಮಂದಿ ಪಿಎಸ್‌ಐ, 1,400 ಸಿಬಂದಿ, 10 ಕೆಎಸ್‌ಆರ್‌ಪಿ ಪ್ಲಟೂನ್, 14 ಡಿಎಆರ್/ ಸಿಎಆರ್ ಪ್ಲಟೂನ್ ಹಾಗೂ ಹೊರ ಜಿಲ್ಲೆಗಳಿಂದ 300 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರು ತಿಳಿಸಿದ್ದಾರೆ. ವಾಹನ ನಿಲುಗಡೆಗೆ ವ್ಯವಸ್ಥೆ
ಸಭೆಯಲ್ಲಿ ಭಾಗವಹಿಸುವ ಜನರ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
1 ಮೂಡಬಿದಿರೆ, ಎಡಪದವು, ಕೈಕಂಬ, ಗುರುಪುರ, ವಾಮಂಜೂರು ಕಡೆಯಿಂದ ಬರುವ ವಾಹನಗಳು ನಂತೂರು- ಮಲ್ಲಿಕಟ್ಟೆ ಮಾರ್ಗವಾಗಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಜನರನ್ನು ಇಳಿಸಿ, ಬಂಟ್ಸ್‌ಹಾಸ್ಟೆಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.
Related Articles
Advertisement
3ಬಜಪೆ, ಕಟೀಲು, ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳು ಕಾವೂರು, ಯೆಯ್ನಾಡಿ ಮಾರ್ಗವಾಗಿ ನಂತೂರು, ಮಲ್ಲಿಕಟ್ಟೆ ಮೂಲಕ ಬಂದು ಬಂಟ್ಸ್ ಹಾಸ್ಟೆಲ್‌ನಲ್ಲಿ ಜನರನ್ನು ಇಳಿಸಿ, ಕದ್ರಿ ಮೈದಾನದಲ್ಲಿ ನಿಲುಗಡೆ ಮಾಡಬಹುದು.
4ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಬರುವ ವಾಹನ ಗಳು ಬಿ.ಸಿ. ರೋಡ್‌ಮೂಲಕ ಬಂದು ಪಡೀಲ್, ಪಂಪ್‌ವೆಲ್, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಎಮ್ಮೆಕೆರೆ ಮೈದಾನ ದಲ್ಲಿ ನಿಲುಗಡೆ ಮಾಡಬಹುದು.
5 ತೊಕ್ಕೊಟ್ಟು ಕಡೆಯಿಂದ ಬರುವ ವಾಹನಗಳು ಪಂಪ್‌ವೆಲ್, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಮಂಗಳಾದೇವಿ, ಪಾಂಡೇಶ್ವರ ರಸ್ತೆಯ ಅಕ್ಕಪಕ್ಕದಲ್ಲಿ ನಿಲುಗಡೆ ಮಾಡಬಹುದು.
6 ಮಂಗಳೂರು ನಗರದಿಂದ ಬರುವ ಬಸ್ ಮತ್ತು ಚತುಶ್ಚಕ್ರ ವಾಹನಗಳನ್ನು ಸೈಂಟ್ ಆ್ಯನ್ಸ್ ಮತ್ತು ರೊಜಾರಿಯೋ ಶಾಲೆಯ ರಸ್ತೆಯ ಅಕ್ಕಪಕ್ಕ ನಿಲುಗಡೆ ಮಾಡಬಹುದು, ದ್ವಿಚಕ್ರ ವಾಹನಗಳನ್ನು ಕೇಂದ್ರ ಮೈದಾನ ಒಳಗಡೆ ಕ್ರಿಕೆಟ್ ಗ್ರೌಂಡಿನ ಎರಡು ಬದಿಗಳಲ್ಲಿ ನಿಲುಗಡೆ ಮಾಡಬಹುದು.