Advertisement
ಜುಲೈನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೊಳಗಾಗಿದ್ದವರ ದ್ರವವನ್ನು ವಂಶವಾಹಿ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಮವಾರ ವರದಿ ಪ್ರಕಟವಾಗಿದ್ದು, ಇಬ್ಬರಲ್ಲಿ ಹೊಸ ಎವೈ 4.2 ರೂಪಾಂತರಿ ದೃಢಪಟ್ಟಿದೆ.
Related Articles
Advertisement
ಈ ಹಿಂದೆ ರಾಜ್ಯದಲ್ಲಿ ವಿವಿಧ ರೂಪಾಂತರಿ ವೈರಾಣು ಪ್ರಕರಣಗಳು ಪತ್ತೆಯಾಗಿವೆ. ಅಲ್ಫಾ – 155, ಬಿಟಾ 8, ಡೆಲ್ಟಾ 1679, ಡೆಲ್ಟಾ ಪ್ಲಸ್ 4, ಡೆಲ್ಟಾ ಎವೈ .4 – 265, ಡೆಲ್ಟಾ ಎವೈ .12 – 15, ಕಪ್ಪಾ 160, ಇಟಾ 1 ರೂಪಾಂತರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ 1679 ಮತ್ತು ಮೂರನೇ ಅಲೆಗೆ ಕಾರಣವಾಗಬಹದು ಎಂದು ತಜ್ಞರು ಅಂದಾಜಿಸಿದ್ದ ಡೆಲ್ಟಾ ಪ್ಲಸ್ 4 ಮಂದಿಯಲ್ಲಿ ದೃಢಪಟ್ಟಿತ್ತು. ಆದರೆ, ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಹೆಚ್ಚಿನ ಹಾನಿಯಾಗಿರಲಿಲ್ಲ.