Advertisement

ಭತ್ತ ಕಟಾವು ಯಂತ್ರಗಳ ಚಾಲಕರಿಗೆ ಕೋವಿಡ್-19 ಸೋಂಕು ಜಾಗೃತಿ

11:16 AM Apr 06, 2020 | keerthan |

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಕಟಾವು ಕಾರ್ಯ ಇದೀಗ ಆರಂಭವಾಗಿದ್ದು  ಸ್ಥಳೀಯ ಮತ್ತು ಅನ್ಯ ಊರುಗಳಿಂದ ಭತ್ತ ಕಟಾವು ಮಾಡುವ ಯಂತ್ರಗಳ ಚಾಲಕರು ಮತ್ತು ಕ್ಲೀನರ್ ಗಳು ಆಗಮಿಸಿದ್ದು ಅವರಿಗೆ ಕೋವಿಡ್-19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಿತು.

Advertisement

ಕೋವಿಡ್-19 ಜಾಗೃತಿ ಕುರಿತು ತಾಲೂಕು ಪಂಚಾಯತ್ ಇಒ ಡಾ.ಮೋಹನ ಕುಮಾರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಬಸಾಪಟ್ಟಣ ಸೇರಿ ಇತರೆ ಭಾಗದಲ್ಲಿ ಈ ಟಾಸ್ಕ್ ಫೋರ್ಸ್ ಸದಸ್ಯರು ಸಂಚರಿಸಿ ಕೋವಿಡ್-19 ವೈರಸ್ ಹರಡುವ ಬಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು.

ಜನರು ಸೋಂಕು ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಬೇಕು, ಸಾಬೂನು ಇತರೆ ಸ್ವಚ್ಛತೆ ವಸ್ತು ಬಳಕೆ ಮಾಡಬೇಕು, ಇತರೆ ಕಾರ್ಮಿಕರ ಜತೆ ಭೌತಿಕ ಅಂತರ ಕಾಪಾಡುವಂತೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next