Advertisement
ಜನರಿಗೆ ಕೋವಿಡ್-19 ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕ ಜಾಗಗಳಾದ ಅಂಗಡಿ, ಆಸ್ಪತ್ರೆ ಮೊದಲಾದ ಕಡೆಯಲ್ಲಿ ತುಳು ಲಿಪಿಯಲ್ಲಿ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಆ ಮೂಲಕ ಲಿಪಿಯ ಪ್ರಚಾರ, ಕೋವಿಡ್-19 ಬಗ್ಗೆ ಜಾಗ್ರತೆ ಮೂಡಿಸುವ ಎರಡೆರಡು ಕೆಲಸ ಆಗುತ್ತಿದೆ. ಉಡುಪಿಯ ಕಡಿಯಾಳಿ, ಕೃಷ್ಣಮಠ ಸೇರಿದಂತೆ ಕಾರ್ಕಳ, ಬಜಗೋಳಿ, ಹೊಸ್ಮಾರ್, ಪುತ್ತೂರು ಮಂಗಳೂರು ಭಾಗದಲ್ಲಿ ಈಗಾಗಲೇ ಪೋಸ್ಟರ್ ಹಾಕಲಾಗಿದ್ದು ಉಳಿದೆಡೆ ಪೋಸ್ಟರ್ ಹಚ್ಚುವ ಕೆಲಸ ನಡೆಯುತ್ತಿದೆ.
ಕಳೆದ ವಾರ ತುಳು ಲಿಪಿಯ ಜನಜಾಗ್ರತಿ ಮತ್ತು ತುಳು ಲಿಪಿಯ ಅಪಪ್ರಚಾರದ ವಿರುದ್ಧ ಟ್ವಿಟ್ಟರ್‌ನಲ್ಲಿ “ಟ್ವಿಟ್ ತುಳುನಾಡು’ ಹ್ಯಾಶ್ ಟ್ಯಾಗ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ತುಳು ಸಂಸ್ಕೃತಿ ಆಚಾರ ವಿಚಾರಗಳನ್ನು ಪ್ರಶಂಸಿಸಿ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ ತುಳುಭಾಷೆಗೆ ಪ್ರೋತ್ಸಾಹಿಸಿದ್ದಾರೆ. ಪದ-ತುಳು ಆ್ಯಪ್
ತುಳು ಲಿಪಿ ಟೈಪ್ ಮಾಡಲು “ಪದ-ತುಳು’ ಎಂಬ ಹೊಸ ಆ್ಯಪ್ ಅನ್ನು ತಯಾರಿಸಲಾಗಿದೆ. ಗೂಗಲ್ ಆ್ಯಂಡ್ರೈಡ್ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದೆ.
Related Articles
ತುಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಕೆ.ಪಿ. ರಾವ್ ಅವರು ಭೇಟಿಯಾದಾಗ ಈ ಬಗ್ಗೆ ಅಭಿಪ್ರಾಯ ಮೂಡಿತ್ತು. ಇದರಿಂದ ತುಳು ಬರೆಯಲು ಸಹಕಾರವಾಗಬಹುದೆಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಹಿಂದೆಯೂ ಕನ್ನಡ, ತಮಿಳು ಭಾಷೆಗೆ ಆ್ಯಪ್ ಮಾಡಿದ್ದೇವೆ. ತುಳುಸಿರಿ ಫಾಂಟ್ ಬಳಕೆ ಮಾಡಿಕೊಂಡು ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದೀಗ ಪದ-ತುಳು ಆ್ಯಪ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.
-ಲೋಹಿತ್ ಶಿವಮೂರ್ತಿ. , ಪದ-ತುಳು ಆ್ಯಪ್ ಅಭಿವೃದ್ಧಿಪಡಿಸಿದವರು.
Advertisement
ತುಳು ಪೋಸ್ಟರ್ಕೋವಿಡ್-19 ತಡೆಗೆ ಕರಾವಳಿ ಭಾಗದ ಜನರು ಉತ್ತಮ ಸ್ಪಂದಿಸುತ್ತಿದ್ದಾರೆ. ಇನ್ನು ಕೂಡ ಜಾಗರೂಕರಾಗಿರ ಬೇಕೆಂದು ಜೈ ತುಳುನಾಡು ಸಂಘಟನೆ ಮೂಲಕ ಈ ತುಳು ಲಿಪಿಯ ಪೋಸ್ಟ್‌ರ್ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ.
– ರವಿಚಂದ್ರ ಆಚಾರ್ಯ ದುರ್ಗಾನಗರ ,
ಪ್ರಧಾನ ಸಂಚಾಲಕರು, ಜೈ ತುಳುನಾಡು ಕಾರ್ಕಳ