ಗಂಗಾವತಿ: ಮಹಾಮಾರಿ ಕೋವಿಡ್-19 ವೈರಸ್ ವಿರುದ್ದ ಇಡೀ ಜಗತ್ತು ಸಮರ ಸಾರಿದೆ. ಈ ರೋಗವನ್ನು ಹರಡದಂತೆ ತಡೆಯಲು ಭೌತಿಕ ಅಂತರ ಮುಖ್ಯ. ವೈದ್ಯರು ಪೌರ ಕಾರ್ಮಿಕರು ಪೊಲೀಸರು ಮತ್ತು ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ ಹೇಳಿದರು.
ಅವರು ಕೋವಿಡ್-19 ವಿರುದ್ಧ ನಗರಸಭೆ ಪೌರಕಾರ್ಮಿಕರು ಆಯೋಜಿಸಿದ್ದ ಜನಜಾಗೃತಿ ಜಾಥದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಿವೈಎಸ್ ಪಿ ಡಾ.ಚಂದ್ರಶೇಖರ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಕೋವಿಡ್-19 ವಿರುದ್ಧದ ಸರಕಾರದ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕು. ಮನೆಯಲ್ಲಿದ್ದು ರೋಗ ಹರಡುವುದನ್ನು ತಡೆಯುವಂತೆ ಕರೆ ನೀಡಿದರು.
300ಕ್ಕೂ ಅಧಿಕ ಪೌರಕಾರ್ಮಿಕರು ಪೊಲೀಸರು ಜಾಥದಲ್ಲಿ ಭೌತಿಕ ಅಂತರದಲ್ಲಿ ಜಾಥದಲ್ಲಿ ಪಾಲ್ಗೊಳ್ಳಲು ಮೂಲಕ ಇತರರಿಗೆ ಮಾಹಿತಿಯಾದರು.
ತಾ.ಪಂ ಇಒ ಡಾ.ಮೋಹನಕುಮಾರ, ಪ್ರಭಾರಿ ಪೌರಾಯುಕ್ತ ಗಂಗಾಧರ, ಪೊಲೀಸ್ ಅಧಿಕಾರಿಗಳಾದ ವೆಂಕಟಸ್ವಾಮಿ,ಸುರೇಶ ತಳವಾರ,ಚಂದ್ರಪ್ಪ, ಜೆ.ದೊಡ್ಡಪ್ಪ, ಅಭಿಯಂತರ ಆರ್.ಆರ್.ಪಾಟೀಲ್ ಸೇರಿ ಅನೇಕರಿದ್ದರು