Advertisement

ಅಣು ವಿಕಿರಣ ಕುರಿತು ಜಾಗೃತಿ ಅಗತ್ಯ

12:37 PM Dec 04, 2017 | Team Udayavani |

ಕೆಂಗೇರಿ: ರಾಸಾಯನಿಕ ಹಾಗೂ ಅಣು ವಿಕಿರಣಗಳಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಜಾಗೃತರಾಗುವ ಮೂಲಕ ಭವಿಷಯದಲ್ಲಿ ಎದುರಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅಮೆರಿಕದ ರಿಚ್‌ಲ್ಯಾಂಡ್‌ ಆಪರೇಷನ್‌ ಎನರ್ಜಿ ವಿಭಾಗದ ಮಾಜಿ ವ್ಯವಸ್ಥಾಪಕ ಕೀತ್‌ ಎಕ್ಲೇನ್‌ ತಿಳಿಸಿದರು.

Advertisement

ಬೆಂಗಳೂರು-ಮೈಸೂರು ಮುಖ್ಯ ರಸ್ತೆಯ ಕುಂಬಳಗೋಡು ಡಾನ್‌ ಬಾಸ್ಕೊ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ಹಾಗೂ ವಿಕಿರಣ ವಿಪತ್ತು ನಿರ್ವಹಣೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಹಾಗೂ ಸುರಕ್ಷಿತ ವ್ಯವಸ್ಥೆ ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. 

ಅಮೆರಿಕದ ಆರ್‌ಜೆ ಲೀ ಗ್ರೂಪ್‌ ಸೆಂಟರ್‌ನ ತಾಂತ್ರಿಕ ವಿಭಾಗದ ನಿರ್ದೇಶಕ ಲ್ಯಾರಿ ಎಲ್‌. ಲಾಕ್‌ರೆಮ್‌ ಮಾತನಾಡಿ, ಜೈವಿಕ ಹಾಗೂ ರೇಡಿಯಾಲಾಜಿಕಲ್‌ ಲ್ಯಾಬೊರೋಟರಿಗಳಿಂದ ಹೊರಬರುವ ಕಲುಷಿತ ತ್ಯಾಜ್ಯವನ್ನು ಅತ್ಯಾಧುನಿಕ ತಾಂತ್ರಿಕ ಉಪಕರಣಗಳನ್ನು ಬಳಸಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವ ಮೂಲಕ ನಾಗರಿಕರ ಆರೋಗ್ಯ ಆದ್ಯತೆ ನೀಡಬೇಕಿದೆ ಎಂದರು.

ಎಸಿಎಚ್‌ಎಂಎಂ ಇಂಡಿಯಾ ವಿಭಾಗದ ಸಂಸ್ಥಾಪಕ ಅಧ್ಯಕ್ಷ ಡಾ.ರಾಮ್‌ಪುರ್‌ ವಿಶ್ವನಾಥ್‌, ಉಪಾಧ್ಯಕ್ಷ ಡಾ.ಬಿ.ಎಸ್‌.ಜಯಪ್ರಕಾಶ್‌, ಪ್ರಿನ್ಸಿಪಾಲ್‌ ಡಾ.ಎಂ.ಮುರಳೀಧರ್‌ ರಾವ್‌, ತಾಂತ್ರಿಕ ಮಹಾವಿದ್ಯಾಲಯದ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಆರ್‌. ಕೃಷ್ಣ , ಸಿವಿಲ್‌ ವಿಭಾಗದ ಮುಖ್ಯಸ್ಥ ಪ್ರಸನ್ನ ಕುಮಾರ್‌, ಸಂಚಾಲಕ ಎ.ಜಸ್ವಂತ್‌ಗೌಡ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next