Advertisement

ಹಕ್ಕು ಪಡೆಯಲು ಜಾಗೃತಿ ಅವಶ್ಯ

11:05 AM Oct 13, 2018 | Team Udayavani |

ಬಸವಕಲ್ಯಾಣ: ಸಮಾಜದಲ್ಲಿ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿದ್ದರೂ ಮಾನವರು ಮಾತ್ರ ತಮ್ಮಷ್ಟಕ್ಕೆ ತಾವೇ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಎಸ್‌ಐಒ ರಾಜ್ಯಧ್ಯಕ್ಷ ರ ಫೀಕ್‌ ಅಹ್ಮದ್‌ ಹೇಳಿದರು.

Advertisement

ನಗರದ ಹಳೆ ತಹಶೀಲ್ದಾರ್‌ ಕಚೇರಿ ಬಳಿ ನಡೆದ “ಅರಿವಿನ ನಾಳೆಗಾಗಿ’ ರ್ಯಾಲಿಯಲ್ಲಿ ಮಾತನಾಡಿದ ಅವರು, ಸುಖ ಶಾಂತಿ ಬದುಕು ನಮ್ಮದಾಗಬೇಕಾದರೆ, ನಾವು ಮೊದಲು ಜಾಗೃತರಾಗಬೇಕು. ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಯುಸುಫ್‌ ಕುನ್ನಿ ಮಾತನಾಡಿ, ದೇಶದಲ್ಲಿ ಅರಾಜಕತೆ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದೆ. ನಮ್ಮನ್ನಾಳುವ ಮುಖಂಡರು ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಪಕ್ಷಗಳ ಪರಸ್ಪರ ಅರ್ಥಹೀನ-ಅನೈತಿಕ ರಾಜಕೀಯ ಗುಲಾಮಗಿರಿ, ತನಗೆ ತೋಚಿದ ಸಿದ್ಧಾಂತಗಳನ್ನು ನಮ್ಮ ಮೇಲೆ ಹೇರುತ್ತಾ ನಮ್ಮನ್ನು ಸೌಲಭ್ಯಗಳಿಂದ ದೂರ ಇಟ್ಟಿದ್ದಾರೆ. ನಮ್ಮ ಹಕ್ಕು ಪಡೆಯಲು ಯುವಕರು ಒಂದಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.

ಎಸ್‌ಐಒ ಮುಖಂಡ ಜೀಶಾನ ಸಿದ್ದೀಕಿ ಮಾತನಾಡಿ, ಅರಿವಿನ ನಾಳೆಗಾಗಿ ಕನಸಿನೊಂದಿಗೆ ನಾಡಿನ ವಿದ್ಯಾರ್ಥಿ ಯುವಕರಿಗಾಗಿ ಇದೇ ಅಕ್ಟೋಬರ್‌ 19ರಿಂದ 21ರ ವರೆಗೆ ರಾಯಚೂರಿನ ಲಿಟಲ್‌ ಏಂಜಲ್ಸ್‌ ಶಾಲೆಯ ಮೈದಾನದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದು, ಯುವಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಮಾತೆ ಇಸ್ಮಾ ಹಿಂದ್‌ ಅಧ್ಯಕ್ಷ ಹಾಪೀಜ್‌ ಅಸ್ಲಂ ಜನಾಬ, ವೆಲ್ಫೆರ್‌ ಆಫ್‌ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಮುಜಾಹಿದ್‌ ಪಾಶಾ ಖುರೇಶಿ, ಶ್ರೀ ಬಸವೇಶ್ವರ ಚಿಕತ್ರಕಲಾ ಕಾಲೇಜಿನ ಪ್ರಾಚಾರ್ಯ ಪ್ರಭುಲಿಂಗಯ್ನಾ ಬಿ.ಟಂಕಸಾಲಿಮಠ, ಅಕ್ರಮಅಲಿ ಮತ್ತಿತರರು ಇದ್ದರು. ಶೇರ ಅಲಿ ನಿರೂಪಿಸಿದರು. ರೀಯಾಜ್‌ ಪಟೇಲ್‌ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next