Advertisement

ಸೀಲ್‌ಡೌನ್‌ ಪ್ರದೇಶದಲ್ಲಿ ಜಾಗೃತಿ

06:41 AM Jun 05, 2020 | Lakshmi GovindaRaj |

ತಿಪಟೂರು: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗೆ ಕೋವಿಡ್‌ 19 ಪಾಸಿಟಿವ್‌ ಬಂದ ಹಿನ್ನೆಲೆ ಬಡಾವಣೆಯ 8ರಿಂದ 12ನೇ ಕ್ರಾಸ್‌ವರೆಗೆ ಕಂಟೈನ್‌ಮೆಂಟ್‌ ಝೋನ್‌ ಮಾಡಲಾಗಿದೆ ಎಂದು ನಗರ  ಠಾಣೆ ಇನ್ಸ್‌ಪೆಕ್ಟರ್‌ ನವೀನ್‌ ಹೇಳಿದರು.

Advertisement

ಚಾಮುಂಡೇಶ್ವರಿ ಬಡಾವಣೆಯ ನಿವಾಸಿಗಳಲ್ಲಿ ಕೋವಿಡ್‌ 19 ಬಗ್ಗೆ ಜಾಗೃತಿ ಮೂಡಿಸಿದ ಅವರು, ಪ್ರದೇಶವನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡ ಲಾಗಿದ್ದು, ಮನೆಗಳಿಂದ ಯಾವುದೇ  ಕಾರಣಕ್ಕೂ ಯಾರೂ ಹೊರಬರಬೇಡಿ, ಅಗತ್ಯ ವಸ್ತು, ಆರೋಗ್ಯ ಸೇವೆಗೆ ಇಬ್ಬರು ವಾಲೆಂಟರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 6 ಅಡಿ ಸಾಮಾಜಿಕ  ಅಂತರ  ಕಾಪಾಡಿಕೊಳ್ಳಬೇಕು. ವಯಸ್ಸಾ ದವರು, ಚಿಕ್ಕ ಮಕ್ಕಳ ಬಗ್ಗೆ ಆರೋಗ್ಯ ಕಾಳಜಿ ವಹಿಸಬೇಕು. ಆರೋಗ್ಯ ಕಾರ್ಯ ಕರ್ತರು ತಪಾಸಣೆಗೆ ಬಂದಾಗ ಪ್ರತಿಯೊ ಬ್ಬರು ಸಹಕರಿಸಬೇಕು. ಈ ಬಡಾವಣೆ ಯಲ್ಲಿ ವಾಹನ ಸಂಚಾರವನ್ನು  ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಲ್ಲಿರುವ ಈ ಪ್ರದೇಶ ದಲ್ಲಿ ಮೇಲ್ಕಂಡ ಸೂಚನೆ ಉಲ್ಲಂಘಿ ಸಿದಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕಣ್ಗಾವಲಿಗಾಗಿ ಡ್ರೋಣ್‌  ಕ್ಯಾಮೆರಾ ಮೂಲಕ ಸಾರ್ವಜನಿಕರಿಗೆ ಸಂದೇಶ ಹಾಗೂ ಪ್ರದೇಶದ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು. ನಗರಠಾಣೆ ಸಬ್‌ಇನ್ಸ್‌ಪೆಕ್ಟರ್‌ ದಾಕ್ಷಾಯಣಿ ಹಾಗೂ ಸಿಬ್ಬಂದಿ ಕೋವಿಡ್‌ 19 ಬಗ್ಗೆ ಬಡಾವಣೆ ನಿವಾಸಿಗಳಿಗೆ  ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next