Advertisement

ಕೋವಿಡ್ 19 ಸೈನಿಕರಿಂದ ಜಾಗೃತಿ

04:25 PM May 10, 2020 | Suhan S |

ಚಿಕ್ಕಬಳ್ಳಾಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಭಾರತೀಯ ರೆಡ್‌ ಕ್ರಾಸ್‌ಸಂಸ್ಥೆಯ ಸಹ ಯೋಗದೊಂದಿಗೆ ತಾಲೂಕಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಕೋವಿಡ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

Advertisement

ತಾಲೂಕಿನ ಮುಸ್ಟೂರು, ಗೇರಹಳ್ಳಿ, ಅಗಲಗುರ್ಕಿ, ಸೂಲಕುಂಟೆ, ಎಸ್‌ . ಗೊಲ್ಲಹಳ್ಳಿ, ನಲ್ಲಗುಟ್ಟಹಳ್ಳಿ, ಜಂಗಮರಪ್ಪ ಹಳ್ಳಿ, ಇಟ್ಟಪ್ಪನಹಳ್ಳಿ, ಸಾದೇನಹಳ್ಳಿ, ಕೇತೆನಹಳ್ಳಿ, ಆನೆಮೊಡಗು, ಎ.ಕೊತ್ತ ನೂರು ಮತ್ತಿತರ ಗ್ರಾಮಗಳಿಗೆ ಭೇಟಿ ಮಾಡಿ ಹಳ್ಳಿಯ ಜನರಲ್ಲಿ ಕೋವಿಡ್ ಮಹಾಮಾರಿ ಬಗ್ಗೆ ಹಾಗೂ ಕೋವಿಡ್ ಹರಡದಂತೆ ನಾಗರಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಕೋವಿಡ್ ಸೈನಿಕರಾದ ಸ್ನೇಕ್‌ ಪೃಥ್ವಿರಾಜ್‌ ಮಾತನಾಡಿ, ನಿಮಗೆ ರೋಗ ಲಕ್ಷಣಗಳಾದ ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ಕಂಡು ಬಂದರೆ ತಕ್ಷಣ ತಡ ಮಾಡದೇ ವೈದ್ಯರನ್ನು ಭೇಟಿ ಮಾಡಿ ಎಂದರು.

ಮೋಹನ್‌ ಕುಮಾರ್‌ಗೌಡ , ಗಂಗಾ ಧರ್‌, ಆಶಾ, ಸ್ಟುಡಿಯೋ ಶ್ರೀನಿವಾಸ್‌, ಪ್ರಜ್ವಲ್  ಕೋವಿಡ್ ಜಾಗೃತಿ ಪತ್ರ ಹಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next